ಶಿಕ್ಷಕ ವಸಂತರಾಜ ಶೆಟ್ಟಿಗೆ ಸನ್ಮಾನ

gaurava
gaurava
Published on

ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂ ವತಿಯಿಂದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹ ಶಿಕ್ಷಕ ವಸಂತರಾಜ ಶೆಟ್ಟಿ ಅವರನ್ನು ಸಂಘ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು ಸನ್ಮಾನಿಸಿ ಗೌರವಿಸಿದರು.

ಸಂಘ ಸ್ಥಾಪಕಾಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಉದಯಕುವಾರ್ ಶೆಟ್ಟಿ ಮಚ್ಚಟ್ಟು, ಪ್ರಶಾಂತ್ ಶೆಟ್ಟಿ ಶಿರೂರು, ಸುನೀಲ್‌ಕುವಾರ್ ಶೆಟ್ಟಿ ಹೇರಿಕುದ್ರು, ಸುಕುವಾರ ಶೆಟ್ಟಿ ಹೇರಿಕುದ್ರು, ರಾಜೀವ ಶೆಟ್ಟಿ ಹೆಂಗವಳ್ಳಿ, ರತ್ನಾಕರ ಶೆಟ್ಟಿ, ಸಂತೋಷ್‌ಕುವಾರ್ ಶೆಟ್ಟಿ ವಡೇರಹೋಬಳಿ, ಪ್ರಭಾಕರ ಶೆಟ್ಟಿ ಯಳಂತೂರು, ಸಂದೇಶ ಶೆಟ್ಟಿ ಗುಳ್ವಾಡಿ, ಪ್ರಕಾಶ್ ಶೆಟ್ಟಿ ಬಗ್ವಾಡಿ, ಲಯನ್ಸ್ ಸದಸ್ಯ ಗಣೇಶ್ ಬೈಂದೂರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ನಿರೂಪಿಸಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net