ಶಿಕ್ಷಕ ವರ್ಗಾವಣೆ, ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

4knk3
ಶಿಕ್ಷಕ ನಾಗರಾಜ ವರ್ಗಾವಣೆಗೊಂಡು ತೆರಳುವಾಗ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು.
Published on

ಕನಕಗಿರಿ: ತಾಲೂಕಿನ ಸೋಮಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿ ವರ್ಗಾವಣೆಗೊಂಡ ನಾಗರಾಜ, ಬೀಳ್ಕೊಡುಗೆ ನಂತರ ಬೇರೊಂದು ಶಾಲೆಗೆ ತೆರಳುವಾಗ ವಿದ್ಯಾರ್ಥಿಗಳು, ಅಡುಗೆಯವರು ಬಿಕ್ಕಿ ಬಿಕ್ಕಿ ಅತ್ತಿರುವ ಪ್ರಸಂಗ ಶುಕ್ರವಾರ ನಡೆದಿದೆ.

ಎಲ್ಲರ ನೆಚ್ಚಿನ ಶಿಕ್ಷಕನಾಗಿದ್ದ ನಾಗರಾಜ, ಎಲ್ಲರೊಂದಿಗಿ ಉತ್ತಮ ಬಾಂಧವ್ಯ ಹೊಂದಿದ್ದರು. 2016ರಲ್ಲಿ ಶಿಕ್ಷಕ ಹುದ್ದೆಗೆ ನೇಮಕ ಹೊಂದಿ ಸೋಮಸಾಗರ ಶಾಲೆಗೆ ಬಂದಿದ್ದು, ಸತತ 8 ವರ್ಷಗಳ ಕಾಲ ಅದೇ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ.

ಇತ್ತೀಚೆಗೆ ನಡೆದ ವರ್ಗಾವಣೆಯಲ್ಲಿ ಹಿರೇಖೇಡ ಶಾಲೆಯನ್ನುಆಯ್ಕೆ ಮಾಡಿಕೊಂಡಿದ್ದು,ಹಿರೇಖೇಡ ಶಾಲೆಗೆ ತೆರಳುತ್ತಿರುವಾಗ ವಿದ್ಯಾರ್ಥಿ ಸಮೂಹ, ಶಿಕ್ಷಕ ವರ್ಗ, ಅಡುಗೆಯವರು ಬಿಕ್ಕಿ ಬಿಕ್ಕಿ ಅಳುವ ಮೂಲಕ ನೆಚ್ಚಿನ ಶಿಕ್ಷಕನನ್ನು ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net