ಶಿಕ್ಷಕರ ಕಾರ್ಯಕ್ಕೆ ಬಿಇಒ ಮೆಚ್ಚುಗೆ

21MDLG2
Published on

ಮೂಡಲಗಿ: ಸರ್ಕಾರದ ಅನುದಾನಕ್ಕೆ ಕಾಯದೆ ಸರ್ಕಾರಿ ಉರ್ದು ಶಾಲೆಯನ್ನು ಸುಣ್ಣ-ಬಣ್ಣ ಹಚ್ಚಲು ಶಿಕ್ಷಕ ಸಮೂಹ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಕಾರಿ ಅಜೀತ ಮನ್ನಿಕೇರಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ಸಮೂಹ, ಎಸ್‌ಡಿಎಂಸಿ ಪದಾಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ 2 ಲಕ್ಷ ರೂ. ಹಣದಲ್ಲಿ ಶಾಲೆಯನ್ನು ಬಣ್ಣ ಹಚ್ಚುವ ಕಾರ್ಯ ಕೈಗೊಂಡಿರುವುದು ಮಾದರಿ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಅಜೀಜ್ ಡಾಂಗೆ ಮಾತನಾಡಿದರು. ಮುಖ್ಯಾಧ್ಯಾಪಕಿ ನೀಲಮ್ಮ ಭೋವಿ, ಶಿಕ್ಷಕರಾದ ಎ.ಎಲ್, ತಹ್ವೀಲ್ದಾರ್, ಮಹಾಲಿಂಗ ಒಂಟಗೋಡಿ, ಎಲ್.ಎ.ಮೆಕನಮರಡಿ, ಎಂ.ಜೆ.ಇನಾಮದಾರ್, ಎಂ.ಎಚ್.ಬೆಟಗೇರಿ, ಸರಸ್ವತಿ ಹೊಸಮನಿ, ದ್ವೀತಿಯ ದರ್ಜೆ ಸಹಾಯಕಿ ಭಾರತಿ ವಾಲಿಕಾರ ಮತ್ತು ಲಲಿತಾ ಪಾಟೀಲ, ಸುನೀಲ ಗಿರಡ್ಡಿ ಅವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಪದಾಕಾರಿಗಳಾದ ಅನ್ವರ ನದ್ಾ, ಅಬ್ದುಲಗಾರ ಡಾಂಗೆ, ಲಾಲಸಾಬ ಸಿದ್ದಾಪೂರ, ಹುಸೇನ ಥರಥರಿ, ಹಸನ್ ಥರಥರಿ ಮತ್ತು ಮುಖಂಡರಾದ ಮಲಿಕ ಹುಣಶ್ಯಾಳ, ಶರೀ ಪಟೇಲ್, ಇರ್ಶಾದ್ ಇನಾಮದಾರ್, ಗಜ್ಜಬರ ಗೋಕಾಕ, ಮಲಿಕ ಪಾಶ್ಚಾಪೂರ, ಖ್ವಾಜಾ ಅತ್ತಾರ, ಬಿ.ಎ.ಡಾಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net