

ರೋಣ: ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಂದೇ ನಾಣ್ಯ ಎರಡು ಮುಖಗಳು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸಾಧಕರನ್ನಾಗಿ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಂದೆ ತಾಯಿಗೆ ಕೀರ್ತಿ ತರಬೇಕು ಎಂದು ಅಂಜುಮನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಲ್ಲಹಾಜ್ ಎ.ಐ. ಶೇಖ್ ಹೇಳಿದರು.
ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ 1996-97ನೇ ಸಾಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ 2000-01ನೇ ಸಾಲಿನ ಅಂಜುಮನ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಸ್ಲಾಂ ಕಮಿಟಿ ಅಧ್ಯಕ್ಷ ಬಾವಾಸಾಬ ಬೇಟಗೇರಿ, ಜನಾಬ್ ಎನ್.ಎ. ಮುಲ್ಲಾ, ಜನಾಬ್ ಎ.ಎಂ. ಇಂಡಿಕರ್, ಎ.ಎಸ್. ಖತೀಬ, ಎಸ್.ಎಂ. ಮುಧೋಳ, ಎಸ್.ಎ. ಖತೀಬ, ಎಂ.ಎ. ಯಾದವಾಡ, ಬಾವಾಜಾನ್ ಗುಡುನಾಯ್ಕರ್, ಶಿಕ್ಷಕಿ ಶಾಹೀದಾಬಾನು ಮುಲ್ಲಾ, ಅಬ್ದುಲ್ ಮಜೀದ ಕೊಪ್ಪಳ, ಎಂ.ಎ. ಇಟಗಿ ಇತರರು ಇದ್ದರು.