ಶಿಕ್ಷಕ ಮಗುವಿನ ಕಲಿಕಾ ಶಕ್ತಿ ಹೆಚ್ಚಿಸಲಿ

22 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಕನಾದವನು ಸದಾ ಸ್ನೇಹಮಯಿ, ಅಧ್ಯಯನ ಪ್ರೇಮಿ ಹಾಗೂ ಸತತ ಅಭ್ಯಾಸಿಯಾಗಿರಬೇಕು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಜಾಣ್ಮೆ ಇರಬೇಕು. ವಿದ್ಯಾರ್ಥಿಗಳು ಮಟ್ಟಕ್ಕಿಳಿದು ಬೋಧನೆ ಮಾಡುವ ಮೂಲಕ ಮಗುವಿನ ಕಲಿಕಾ ಆಸಕ್ತಿ ಹೆಚ್ಚಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್​ ಸದಸ್ಯ ಶ್ಯಾಮ ಮಲ್ಲನಗೌಡರ ಹೇಳಿದರು.

ನಗರದ ಸೋನಿಯಾ ಶಿಕ್ಷಣ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಿಎಡ್​ 2ನೇ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದೀಪದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವ ತಯಾರಿ, ಸಿದ್ಧತೆ ಮತ್ತು ಬೋಧನೋಪಕರಣಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗುವಂತೆ ಬೋಧನೆ ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಶಿಕ್ಷಕರನ್ನು ಆದರ್ಶ ವ್ಯಕ್ತಿಗಳೆಂದು ಗುರುತಿಸಲು ಸಾಧ್ಯ. ಅಂತಹ ವ್ಯಕ್ತಿತ್ವವನ್ನುಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸೋನಿಯಾ ಎಜ್ಯುಕೇಶನ್​ ಟ್ರಸ್ಟ್​ ಅಧ್ಯಕ್ಷ ಡಾ.ಎಚ್​.ವಿ.ಡಂಬಳ ಮಾತನಾಡಿ, ವೃತ್ತಿ ಜೀವನಕ್ಕೆ ಬೇಕಾದ ಎಲ್ಲ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ಋಣಾತ್ಮಕ ಭಾವನೆ ಬೆಳೆಸಿಕೊಳ್ಳದೆ ಸಕಾರಾತ್ಮಕವಾಗಿದ್ದು, ವಿದ್ಯಾರ್ಥಿಗಳಲ್ಲೂ ಸಕಾರಾತ್ಮಕ ಮನೋಬಲ ಮೂಡಿಸಬೇಕು ಎಂದರು.

ಟ್ರಸ್ಟ್​ ಉಪಾಧ್ಯಕ್ಷ ರೂಪಾ ಡಂಬಳ, ಸೋನಿಯಾ ಡಂಬಳ, ಕಾರ್ಯದರ್ಶಿ ಎಸ್​.ವಿ.ಡಂಬಳ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.

ಪ್ರೊ. ಕಿರಣ ತೋಟಗಂಟಿ ಸ್ವಾಗಸಿದರು. ಡಾ.ಎಸ್​.ಎಸ್​.ಹಿರೇಮಠ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ. ಪಿ.ಬಿ.ಹಳ್ಳಿ ನಿರೂಪಿಸಿದರು. ಡಾ. ಆರ್​.ಐ.ಕಡ್ಲಿಮಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net