

ಮೈಸೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಶಿಕ್ಷಕರಿಗೆ ಸುಜೀವ್ ಫೌಂಡೇಶನ್ ವತಿಯಿಂದ ‘ಶಿಕ್ಷಕ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತ್ಯಾಗರಾಜ ರಸ್ತೆಯ ಅಕ್ಕನ ಬಳಗ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿಜಯ ಸುದರ್ಶನ್ (ಸಂಗೀತ ಶಿಕ್ಷಕಿ), ಅನಸೂಯಾ ಸುದರ್ಶನ್ (ಸಂಗೀತ), ನಾಗಲಕ್ಷ್ಮೀ ನಾಗರಾಜನ್(ನೃತ್ಯ), ಮಿತ್ರ ನವೀನ್ (ನೃತ್ಯ), ಕೆ.ಎಲ್.ಅನಂತರಾಮು(ಕ್ರೀಡೆ), ಡಾ.ಶಶಿಕುಮಾರ್(ಕ್ರೀಡೆ), ರೋಷನ್ ಅರೆಹೊಳೆ(ಯೋಗ), ಡಾ.ಬಿ.ಶ್ರೀನಾಥ(ಯೋಗ), ಕೆ.ಎಸ್.ವೆಂಕಟೇಶ್‌ಮೂರ್ತಿ (ಆಗಮಿಕ), ಕೃಷ್ಣಮೂರ್ತಿ (ಆಗಮಿಕ), ಎಂ.ಜಿ.ಸುಗುಣಾವತಿ(ಶಿಕ್ಷಣ), ಟಿ.ಎಸ್. ಪ್ರಭುಸ್ವಾಮಿ (ಶಿಕ್ಷಣ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ರಾಜಾರಾಂ ಸುಂದರಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮುಕ್ತ ವಿವಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷೆ ಡಾ.ಆರ್.ಎಚ್.ಪವಿತ್ರಾ, ಇಳೈ ಆಳ್ವಾರ್, ಗಾಯಕಿ ಶ್ವೇತಾ ಮಡಪ್ಪಾಡಿ ಇತರರಿದ್ದರು.