

ಗದಗ: ಸಮಾಜದಲ್ಲಿ ಅತ್ಯುತ್ತಮ ಸೇವಾ ಕ್ಷೇತ್ರವಾದ ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷ ಸಾರ್ಥಕ ಸೇವೆ ಹಾಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಹೆಮ್ಮೇಯ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಕುರ್ತಕೋಟಿ ಅವರಿಗೆ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸಮಾಜದ ಗೌರವ ಸನ್ಮಾನ ಸಲ್ಲಿಸಿರುವುದು ಪ್ರಶಂಸನೀಯವೆಂದು ಗದಗ ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಶಕ್ಷರಾದ ದೆವೇಂದ್ರಪ್ಪ ಬಡಿಗೇರ ಹೇಳಿದರು.
ಅವರು ಗದಗ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ನಿಯೋಗದ ಮೂಲಕ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮುಖ್ಶ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು
ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ‘ಉತ್ತಮ ಸಮಾಜ ನಿರ್ಮಾಣಕ್ಕೆ ನಿವೃತ್ತಿ ನಂತರವು ಶ್ರೀಮತಿ ಅನ್ನಪೂರ್ಣ ಕುರ್ತಕೋಟಿ ಅಮ್ಮನವರ ಪಾತ್ರ ಬಹಳ ಮುಖ್ಯವಾಗಿದೆ ಎಂದ ಅವರು ಸಮಾಜದಿಂದ ಏನನ್ನು ಬಯಸದೆ ಶಿಕ್ಷಕಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅದ್ಬುತ ಗೊಡುಗೆ ನಿಡಿದ್ದಾರೆ ಮತ್ತು ಅವರಿಂದ ಕಲಿತವರು ದೊಡ್ಡ ದೊಡ್ಡ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಹೆಮ್ಮೇಯ ವಿಷಯವಾಗಿದೆ ಎಂದು ಹೇಳಿದರು
ಅನ್ನಪೂರ್ಣ ಕುರ್ತಕೋಟಿ ಅವರು ಮಾತನಾಡಿ, ನಾನು ಗದಗಿನ ಬಸವರಾಜ ಹಿಕ್ಕಲಗುತ್ತಿ ಅವರನ್ನು ಮದುವೆ ಆದಮೇಲೆ ಶಿಕ್ಷಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅಲ್ಲಿ ವಿದ್ಯಾರ್ಥಿಗಳು ನನ್ನ ಮೇಲೆ ತೋರಿದ ಪ್ರೀತಿ ವೃತ್ತಿಯನ್ನು ಪ್ರೀತಿಸುವಂತೆ ಮಾಡಿತು. ಎಂದು ತಮ್ಮ ಸಾರ್ಥಕ ಸೇವೆಯ ಬಗ್ಗೆ ನೆನಪಿಸಿ ಮಾತನಾಡಿ ಒಟ್ಟಾರೆ 30 ವರ್ಷಗಳ ನನ್ನ ವೃತ್ತಿ ಜೀವನದ ಅವಿಸ್ಮರಣೀಯ ಬುತ್ತಿಗಂಟಾಗಿದ್ದು, ಮುಂದಿನ ಸಂತಸದ ಜೀವನಕ್ಕೆ ತಳಹದಿಯಾಗಿದೆ ಎಂದರಲ್ಲದೆ ನನ್ನಿಂದ ಸಾದ್ಶವಾದ ಅಲ್ಪ ಸೇವೆಯನ್ನು ಗುರುತಿಸಿ ನಮ್ಮ ಮನೆಗೆ ಆಗಮಿಸಿ ಗೌರವ ಸನ್ಮಾನ ಸಲ್ಲಿಸಿ ಗೌರವಿಸಿದ ಗದಗ ಜಿಲ್ಲಾ ಸವಿತಾ ಸಮಾಜವನ್ನು ಮತ್ತು ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಸಮಸ್ತ ನಿಯೋಗವನ್ನು ಎಂದಿಗೂ ಮರೆಯಲು ಸಾದ್ಶವಿಲ್ಲ ಎಂದು ಹೇಳಿ ಸವಿತಾ ಸಮಾಜಕ್ಕೆ ಕೃತಜ್ಞತೆಗಳು ಸಲ್ಲಿಸಿದರು
ಹಿರಿಯರಾದ ದೀಪಕ ಮಾನೆ ಸ್ವಾಗತಿಸಿದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾನೆ ನಿರೂಪಿಸಿದರು ಜಿಲ್ಲಾ ಖಜಾಂಚಿ ಅರೂಣ ರಾಂಪೂರ ವಂದಿಸಿದರು
ಈ ಸಂದರ್ಭದಲ್ಲಿ ಗಂಗಾಪೂರ ಪೇಟೆಯ ಹಿರಿಯರಾದ ಬಸವರಾಜ ಹಿಕ್ಕಲಗುತ್ತಿ ಕರ್ನಾಟಕ ರಾಜ್ಶ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಗಳಾದ ಹನಮಂತಪ್ಪ ರಾಂಪೂರ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಶಕ್ಷರಾದ ಪರಶುರಾಮ ಕೊಟೇಕಲ್ಲ ಗದಗ ಜಿಲ್ಲಾ ಶ್ರೀ ಸಂತಸೇನಾ ಮಹಾರಾಜ ನಾಭೀಕ ಮರಾಠ ಕ್ಷೌರಿಕ ಸಮಾಜದ ಜಿಲ್ಲಾಧ್ಶಕ್ಷರಾದ ರಾಜು ಮಾನೆ ಸಮಾಜದ ಹಿರಿಯರಾದ ದೆವೇಂದ್ರಪ್ಪ ರಾಂಪೂರ ಪಾಂಡು ಕಾಳೆ ರಮೇಶ ರಾಂಪೂರ ದೀಪಕ ಮಾನೆ ಸುರೇಶ ಬುದೂರ ಬಸವರಾಜ ಗೌಡರ ಮಂಜುನಾಥ ಕರ್ನೂಲ ಶ್ರೀನಿವಾಸ ಕೊಟೇಕಲ್ಲ ಯುವ ನಾಯಕರಾದ ವಿನಾಯಕ ರಾಯಚೂರ ಹಾಗೂ ಸಮಾಜದ ಇತರರು ಉಪಸ್ತಿತರಿದ್ದರು