4 ದಿನದಲ್ಲಿ ಸಮೀಕ್ಷೆ ಟಾರ್ಗೆಟ್​ ತಲುಪಿದ ಶಿಕ್ಷಕ

29 MBL 3
Published on

96 ಮನೆ ಪೂರ್ಣ | 200 ಮನೆಗಳ ಗಣತಿ ಮಾಡುವ ಘೋಷಣೆ

ಮುಳಬಾಗಿಲು: ಸಾಮಾಜಿಕ, ಶೈಣಿಕ, ಆರ್ಥಿಕ ಸ್ಥಿತಿಗತಿ ಹಾಗೂ ಜಾತಿಗಣತಿ ಸಮೀಕ್ಷೆಯಲ್ಲಿ ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಶಿಕ ಎನ್​.ಕೃಷ್ಣಪ್ಪ ಅವರು ನೀಡಲಾದ 96 ಮನೆಗಳ ಸಮೀಕ್ಷೆಯನ್ನು ಕೇವಲ 4 ದಿನದಲ್ಲಿ ಪೂರ್ಣಗೊಳಿಸಿ ಜಿಲ್ಲೆಗೆ ಮಾದರಿಯಾಗಿದ್ದಾರೆ.

ತಾಲೂಕಿನ ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ನಂಗಲಿ ಸಮೀಪದ ಮುದಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ ಎನ್​. ಕೃಷ್ಣಪ್ಪ ಸಮೀಕ್ಷೆ ಸಲುವಾಗಿ ಹೊಸ ಮೊಬೈಲ್​ ಮತ್ತು ನೆಟ್​ವರ್ಕ್​ ಇರುವ ಸಿಮ್​ ಖರೀದಿಸಿ ಗಣತಿ ಪೂರ್ಣಗೊಳಿಸಿದ್ದು, ಶಿಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಮುದುಗೆರೆ ಗ್ರಾಮದಲ್ಲಿ 81ಮನೆಗಳನ್ನು ಸಮೀಕ್ಷೆ ಮಾಡುವಂತೆ ಟಾರ್ಗೆಟ್​ ನೀಡಲಾಗಿತ್ತು. ಆದರೆ 96ಮನೆಗಳನ್ನು ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಬಾಕಿ ಇರುವ 200 ಮನೆಗಳ ಸಮೀಕ್ಷೆಯನ್ನೂ ಮಾಡುವ ಘೋಷಣೆ ಮಾಡಿದ್ದಾರೆ.

ತಾಲೂಕಿನಲ್ಲಿ 536 ಬ್ಲಾಕ್​ಗಳನ್ನಾಗಿ ವಿಂಗಡಣೆ ಮಾಡಿದ್ದು, ಸುಮಾರು 600 ಶಿಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಸತತವಾಗಿ 3 ದಿನಗಳ ಕಾಲ ಸರ್ವರ್​ ಸಮಸ್ಯೆ ಎದುರಾಗಿತ್ತು. ಈ ಮಧ್ಯೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಸಮೀಕ್ಷೆ ಮುಗಿಸಿದ್ದಾರೆ.

ಸನ್ಮಾನ: ಸೋಮವಾರ ಸಂಜೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶಿಕ್ಷಕ ಕೃಷ್ಣಪ್ಪ ಅವರನ್ನು ತಹಸೀಲ್ದಾರ್​ ವಿ.ಗೀತಾ ಗೌರವಿಸಿ ಮಾತನಾಡಿ, ಕೆಲ ಶಿಕರು ಕುಂಟು ನೆಪ ಹೇಳಿಕೊಂಡು ಸಮೀಕ್ಷೆಗೆ ಬಾರದೆ ಒತ್ತಡ ತರುತ್ತಿದ್ದಾರೆ. ಪ್ರತಿದಿನ 150 ರಿಂದ 180 ಮಂದಿ ಸಮೀಕ್ಷೆಗೆ ತಪ್ಪಿಸಿಕೊಳ್ಳುತ್ತಿದ್ದಾರೆ. ಕೆಲವರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನೂ ಕೆಲವರ ಜಾಗಕ್ಕೆ ಹೊಸದಾಗಿ ಗಣತಿದಾರರನ್ನು ನೇಮಕ ಮಾಡಲಾಗುತ್ತಿದೆ, ಆದ್ದರಿಂದ ಈ ಕೆಲಸಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಕೋರಿದರು.

ಗಣತಿದಾರ ಶಿಕ್ಕಕ ಎನ್​.ಕೃಷ್ಣಪ್ಪ ಮಾತನಾಡಿ, ಸಮೀಕ್ಷೆ ಹೋದಾಗ ಮೊಬೈಲ್​ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. 26 ಸಾವಿರ ರೂ. ನೀಡಿ ಹೊಸ ಮೊಬೈಲ್​ ಖರೀದಿಸುವ ಮೂಲಕ ಬೆಳಗ್ಗೆ 6ಗಂಟೆಯಿಂದ ರಾತ್ರಿ 9ರ ಸಮಯದ ವರೆಗೂ ಸಮೀೆ ನಡೆಸಲಾಯಿತು. ಇದಕ್ಕೆ ಗ್ರಾಮಸ್ಥರು ಸಹಕರಿಸಿದ ಕಾರಣ ಸಮೀೆ ಶ್ರೀ ಪೂರ್ಣಗೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.

ತಾಲೂಕಿನಲ್ಲಿ ಸೋಮವಾರ 5,712 ಮನೆ ಸಮೀಕ್ಷೆ ಮುಗಿದಿದ್ದು, ಒಟ್ಟು 10,475 ಮನೆಗಳು ಪೂರ್ಣಗೊಂಡಿರುವುದು ವಿಶೇಷವಾಗಿದೆ. ಭಾನುವಾರದವರೆಗೂ 37 ಶಿಕರು ಗಣತಿಯಿಂದ ದೂರ ಉಳಿದಿದ್ದು, ಸೋಮವಾರ 10 ಮಂದಿ ಮಾತ್ರ ಹಾಜರಾಗಿರುವ ಕಾರಣ ಈ ಸಂಖ್ಯೆ ಕಡಿಮೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net