ಶಿಕ್ಷಕಿ ಲೂಸಿ ಕಾರ್ಯ ಅನನ್ಯ

8 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕರು ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳು. ಭಾರತೀಯ ಸಂಸತಿಯಲ್ಲಿ ಗುರು ಪರಂಪರೆಗೆ ತನ್ನದೇ ಆದ ಗೌರವ ಇದೆ ಎಂದು ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂದ ಪ್ರಧಾನ ಕಾರ್ಯದಶಿರ್ ಡಾ. ಶೈಲಜಾ ಗೌಡ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಅರತಾಯಿ ಲೂಸಿ ಸಾಲ್ಡಾನ ದತ್ತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಲ್ಡಾನ ಅವರದು ಸಾರ್ಥಕ ಬದುಕು. ತ್ಯಾಗಮಯಿಯಾದ ಅವರು ಜನಮಾನಸದಲ್ಲಿ ಉಳಿಯುವ ವ್ಯಕ್ತಿ. ತಮ್ಮ ಜೀವನದ ಅನೇಕ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸಾಧನೆಯ ಶಿಖರ ಏರಿದರು. ವಿದ್ಯಾಥಿರ್ಗಳನ್ನೇ ತನ್ನ ಮಕ್ಕಳೆಂದು ತಿಳಿದು ಶಿಕ ವೃತ್ತಿಯ ಪಾವಿತ್ರ$್ಯತೆ ಹೆಚ್ಚಿಸಿದವರು. ಅವರಲ್ಲಿರುವ ಸಾಮಾಜಿಕ ಕಳಕಳಿ ಅನನ್ಯವಾದದ್ದು ಎಂದರು.
ಡಾ. ಕೆ.ಸಿ.ಜ್ಯೋತಿ ಅವರು "ಭಾವಬಿಂದು' ಪುಸ್ತಕ ಹಾಗೂ "ಚಿಗುರೆಲೆ' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಎರಡೂ ಕೃತಿಗಳು ಓದುಗರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುತ್ತವೆ. ಈ ಕೃತಿಗಳಲ್ಲಿ ಜೀವನಾನುಭವದ ಸಾರವಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀ ಗುರುಕುಮಾರ ವಿರುಪಾ ಸ್ವಾಮೀಜಿ ಆಶೀರ್ವಚನ ನೀಡಿ, ಲೂಸಿ ಸಾಲ್ಡಾನ ತಮ್ಮ ಪರಿಶ್ರಮದಿಂದಲೇ ಸಾಧನೆಯ ಶಿಖಿರವನ್ನೇರಿದವರು. ತಮ್ಮ ಪರೋಪಕಾರ ಗುಣದಿಂದ ಸಮಾಜದ ದೃಷ್ಟಿಯಲ್ಲಿ ದೊಡ್ಡವರಾಗಿದ್ದಾರೆ. ದಾಸೋಹ ಗುಣದ ಅರ ಮಾತೆಯ ಸೇವೆ, ತ್ಯಾಗ ಅನುಕರಣೀಯ ಎಂದರು.
ಧಾರವಾಡ ಗ್ರಾಮೀಣ ೇತ್ರ ಶಿಣಾಧಿಕಾರಿ ರಾಮಕೃಷ್ಣ ಸದಲಗಿ, ದತ್ತಿದಾನಿ ಲೂಸಿ ಸಾಲ್ಡಾನ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ೇತ್ರ ಶಿಣಾಧಿಕಾರಿ ಅಶೋಕ ಸಿಂದಗಿ, ಭೀಮಪ್ಪ ಕಾಸಾಯಿ, ವೀಣಾ ಟೀಚರ, ಅನುಷಾ ಹಿರೇಮಠ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಧನವಂತ ಹಾಜವಗೋಳ, ಮಲ್ಲಿಕಾರ್ಜುನ ಉಪ್ಪಿನ, ಶಿಕರು ಇತರರು ಇದ್ದರು.
ಎಲ್​.ಐ. ಲಕ್ಕಮ್ಮನವರ ಸ್ವಾಗತಿಸಿದರು. ವೈ.ಬಿ. ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ವೀಣಾ ಹೊಸಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net