ಲಾಭದಾಸೆಗೆ ರೂ. 40.85 ಲಕ್ಷ ಕಳೆದುಕೊಂಡ ಶಿಕ್ಷಕಿ !

cen police station
Published on

ಶಿವಮೊಗ್ಗ: ಷೇರು ವ್ಯವಹಾರದಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಕೊಡಿಸುವುದಾಗಿ ನಂಬಿಸಿ ಶಿಕ್ಷಕಿಯೊಬ್ಬರಿಗೆ 40.85 ಲಕ್ಷ ರೂ. ವಂಚಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕ್ಷಕಿ ವಂಚನೆಗೆ ಒಳಗಾದವರು. ಇನ್‌ಸ್ಟಾಗ್ರಾಂನಲ್ಲಿ ಷೇರುಗಳಲ್ಲಿ ಹೂಡಿಕೆ ಕುರಿತು ಉಚಿತ ಸಲಹೆ ಜಾಹೀರಾತು ಬಂದಿತ್ತು. ಅದರ ಮೇಲೆ ಕ್ಲಿಕ್ ಮಾಡಿದಾಗ ಶಿಕ್ಷಕಿಯ ಮೊಬೈಲ್ ನಂಬರ್ ವಾಟ್ಸ್‌ಆಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿತ್ತು. ಅಲ್ಲಿ ಹಲವರು ಷೇರಿನಲ್ಲಿ ಹೂಡಿಕೆ ಮಾಡಿದ ಲಾಭ ಗಳಿಸಿರುವ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಶಿಕ್ಷಕಿಯು ವಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್‌ಗೆ ಮೆಸೇಜ್ ಮಾಡಿದ್ದರು. ಲಿಂಕ್ ಒಂದನ್ನು ಕಳುಹಿಸಿದ್ದ ಅಡ್ಮಿನ್ ಬ್ರೋಕರೇಜ್ ಸಂಸ್ಥೆಯ ಹೆಸರಿನಲ್ಲಿ ಅಕೌಂಟ್ ತೆರೆಯುವುದಾಗಿ ನಂಬಿಸಿದ್ದ. ಅಲ್ಲದೆ ಹಲವು ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ತಿಳಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದ. ಆತನ ಮಾತು ನಂಬಿದ ಶಿಕ್ಷಕಿ ಲಕ್ಷಾಂತರ ರೂ. ವರ್ಗಾಯಿಸಿದ್ದಾರೆ. ಕೊನೆಗೆ ಲಾಭಾಂಶ ನೀಡದೆ ಅಸಲು ಹಿಂದಿರುಗಿಸದೆ ಇದ್ದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದ್ದು, ಶಿವಮೊಗ್ಗದ ಸಿಇಎನ್ ಠಾಣೆಗೆ ಶಿಕ್ಷಕಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net