ಮೇ 17 ರಂದು ಶಿಕ್ಷಕರ ಉದ್ಯೋಗ ಮೇಳ

SANGAMESH MANGANNANVAR
SANGAMESH MANGANNANVAR
Published on

ರಾಯಚೂರು ರುಪ್ಸ್ೃ ಕರ್ನಾಟಕ ತಾಲ್ಲೂಕು ಘಟಕದಿಂದ ಮೇ 17 ರಂದು ಶಿಕ್ಷಕರಿಗಾಗಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆಂದು ಒಕ್ಕೂಟದ ರಾಜ್ಯ ಸಂಚಾಲಕ ಸಂಗಮೇಶ ಮಂಗಾನವರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಉದ್ಯೋಗ ಮೇಳವು ನಗರದ ರೈಲ್ವೆ ನಿಲ್ದಾಣದ ರಸ್ತೆಯ ಸನ್ ರೈಸ್ ಪದವಿ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆಯಲಿದೆ. ಹೊಸ ಉದ್ಯೋಗ ಅವಕಾಶಗಳನ್ನು ಅನ್ವೇಕ್ಷಿಸಲು ಮತ್ತು ವೃತ್ತಿಪರ ಬೆಳವಣಿಗೆ ಸಹಾಯ ಮಾಡುವ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.

ರುಪ್ಸ್ ಕರ್ನಾಟಕ ರಾಜ್ಯದಲ್ಲಿನ ಅನುದಾನ ರಹಿತ ಖಾಸಗಿ ಶಾಲೆಗಳ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕಾರ್ಯ ನಿರ್ವಹಿಸುವ ಪ್ರಮುಖ ಒಕ್ಕೂಟವಾಗಿದೆ. ಈ ಒಕ್ಕೂಟವು ಶಿಕ್ಷಕರ ಉದ್ಯೋಗ ಅವಕಾಶಗಳನ್ನು ವೃದ್ಧಿಸುವುದು, ಶಾಲೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ.

ಎನ್‌ಟಿಸಿ, ಡಿಇಡಿ,ಬಿಇಡಿ, ಬಿಎಸ್ಸಿ ಬಿಇಡಿ, ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಭಾಗವಹಿಸಬಹು ಸುಮಾರು 20-30 ಶಾಲಾ ಆಡಳಿತ ಮಂಡಳಿಗಳು ಭಾಗವಹಿಸಲಿದ್ದು, ಎಲ್ಲ ಅಭ್ಯರ್ಥಿಗಳಿಗೆ ಉಚಿತ ಪ್ರವೇಶವಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಸದಸ್ಯರಾದ ಮಂಜುಳಾ ಸಿ., ಶಂಶಾಲಂ, ಜಂಗ್ಲಪ್ಪ ಗೌಡ, ನರಸಿಂಗ್ ಸಾಗರ, ಪ್ರಶಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net