ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿ - ಡಿಡಿಪಿಐ ಶ್ರೀಶೈಲ ಬಿರಾದಾರ ಸಲಹೆ

Alavandi Books Release Programmee
ಅಳವಂಡಿಯಲ್ಲಿ ನಡೆದ ಶಿಕ್ಷಕ ಕೋಟೆಪ್ಪ ಮೇಟಿ ಬರೆದ ಸ್ಮಾರ್ಟ್ ಮತ್ತು ಶಾರ್ಟ್ ಇಂಗ್ಲೀಷ ಪುಸ್ತಕ ಬಿಡುಗಡೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ವಿತರಣೆ ಕಾರ್ಯಕ್ರಮವನ್ನು ಡಿಡಿಪಿಐ ಎಸ್.ಶ್ರೀಶೈಲ ಬಿರಾದಾರ ಉದ್ಘಾಟಿಸಿದರು.
Published on

ಅಳವಂಡಿ:ಪ್ರಾಮಾಣಿಕವಾಗಿ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರನ್ನು ಸರ್ಕಾರ ಹಾಗೂ ಸಮಾಜ ಗುರುತಿಸುತ್ತದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಪ್ರತಿಭೆ ಗುರುತಿಸುವ ಹೊಣೆ ಶಿಕ್ಷಕರ ಮೇಲಿದೆ.

ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಡಿಡಿಪಿಐ ಎಸ್.ಶ್ರೀಶೈಲ ಬಿರಾದಾರ ಸಲಹೆ ನೀಡಿದರು.

ಗ್ರಾಮದ ಶ್ರೀಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಅಳವಂಡಿ ಹೋಬಳಿ ಪತ್ರಕರ್ತರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಜಿಲ್ಲಾ ಹಾಗೂ ತಾಲೂಕು ಘಟಕ, ಶ್ರೀಸಿದ್ದೇಶ್ವರ ಕಾಲೇಜು ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶಿಕ್ಷಕ ಕೋಟೆಪ್ಪ ಮೇಟಿ ಬರೆದ ಸ್ಮಾರ್ಟ್ ಮತ್ತು ಶಾರ್ಟ್ ಇಂಗ್ಲಿಷ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ಪ್ರತಿ ಪಾಠವನ್ನು ಮಕ್ಕಳಿಗೆ ಮನ ಮುಟ್ಟುವ ರೀತಿಯಲ್ಲಿ ಬೋಧಿಸಬೇಕು. ಜಿಲ್ಲೆಯಲ್ಲಿ ಒಟ್ಟು 26000 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಇವರಲ್ಲಿ 7000 ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಜ್ಞಾನ ಕಡಿಮೆ ಇದೆ. ಇವರನ್ನು ಮುಖ್ಯವಾಹಿನಿಗೆ ತರಬೇಕು. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಕಲುಮುಕ್ತವಾಗಿ ನಡೆಸಲಾಗುವುದು.

ವಿದ್ಯಾರ್ಥಿಗಳು ಪ್ರತಿ ದಿನದ ವಿಷಯವನ್ನು ಮನೆಯಲ್ಲಿ ಅಭ್ಯಸಿಸಬೇಕು ಎಂದು ತಿಳಿಸಿದರು.

ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಿಸರಳ್ಳಿ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಾಕೀರ್ ಹುಸೇನ್ ಕುಕನೂರು,

ಪ್ರಮುಖರಾದ ಶಂಕರಗೌಡ ಮಾಲಿಪಾಟೀಲ, ಶರಣಪ್ಪ ಸುಂಕದ, ಮಾರ್ತಾಂಡರಾವ್ ದೇಸಾಯಿ, ಶಿವಾನಂದಯ್ಯ ಕುಣಕೇರಿಮಠ, ಮೈಲಾರಗೌಡ ಹೊಸಮನಿ, ಗವಿಸಿದ್ದಪ್ಪ ಶೆಟ್ಟರ, ವಿಜಯಕುಮಾರ ಟಿಕಾರೆ, ಸುರೇಂದ್ರಗೌಡ,

ಗುರುಬಸವರಾಜ, ಮುತ್ತಣ್ಣ, ಏಳುಕೋಟೇಶ, ನೀಲಪ್ಪ, ದಾನಯ್ಯ, ಹನುಮಂತ, ನಾಗಪ್ಪ, ತೋಟಯ್ಯ, ಮಲ್ಲಪ್ಪ, ಕೋಟೆಪ್ಪ ಮೇಟಿ, ವಿ.ಎಚ್.ಪುಲೇಶಿ. ನೀಲಪ್ಪ, ಸಾಹಿತಿ ಬಿ.ಎನ್.ಹೊರಪೇಟಿ, ಜೂನುಸಾಬ್ ಇದ್ದರು.

ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ಶಾಲೆ, ಸಂಘಟನೆಗಳು, ಸಂಪನ್ಮೂಲ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಫಲಿತಾಂಶ ಸುಧಾರಣೆಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಮಕ್ಕಳಿದ್ದಲ್ಲಿಗೆ ಕಳುಹಿಸಿ ಮಾಹಿತಿ ಕೊಡಿಸಲಾಗುತ್ತಿದೆ. | ಸೋಮಶೇಖರ ಹರ್ತಿ, ಜಿಲ್ಲಾಧ್ಯಕ್ಷ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net