ಶಿಕ್ಷಕ ಗುರಪಾದ ಹಿಪ್ಪರಗಿ ನಡೆ-ನುಡಿ ಮಾದರಿ

Teacher Gurpada Hipparagi's speech and behavior model
ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನೀಲಕಂಠೇಶ್ವರ ಮಠದಲ್ಲಿ ಹಮ್ಮಿಕೊಂಡ ಶಿಕ್ಷಕ ಗುರುಪಾದ ಹಿಪ್ಪರಗಿಗೆ ನುಡಿನಮನ ಕಾರ್ಯಕ್ರಮಕ್ಕೆ ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಚಾಲನೆ ನೀಡಿದರು. ಮುತ್ತೂರಿನ ಗಿರೀಶ ದೇವರು, ಮರೆಗುದ್ದಿಯ ಗುರುಪಾದ ದೇವರು ಇದ್ದರು.
Published on

ರಬಕವಿ-ಬನಹಟ್ಟಿ: ಸಮಾಜಕ್ಕೆ ಮಾದರಿಯಾಗುವ ಮೂಲಕ ಅಪಾರ ಶಿಷ್ಯ ವೃಂದ ಹೊಂದಿರುವ ಗುರಪಾದ ಹಿಪ್ಪರಗಿ ಅವರ ಆದರ್ಶ ನಡೆ-ನುಡಿ ಎಲ್ಲರಿಗೂ ಮಾದರಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ನಾವಲಗಿ ಗ್ರಾಮದ ನೀಲಕಂಠೇಶ್ವರ ಮಠದಲ್ಲಿ ನಡೆದ ಶಿಕ್ಷಕ ಗುರುಪಾದ ಹಿಪ್ಪರಗಿ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಕಾಲದಲ್ಲಿ ಉತ್ತಮ ಶಿಕ್ಷಕರು ಸಿಗುವುದು ದುರ್ಲಬ. ಸರಳ ಸಜ್ಜನಿಕೆಯ ಶಿಕ್ಷಕರಾಗಿದ್ದ ಹಿಪ್ಪರಗಿ ಅವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.

ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಹಿಪ್ಪರಗಿ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪಾಲಿಸಿದ್ದೆ ಆದರೆ ಅವರ ಆತ್ಮಕ್ಕೆ ನಿಜಕ್ಕೂ ಶಾಂತಿ ದೊರೆಯುವುದು. ಅಂತಹ ಶ್ರೇಷ್ಠ ಶಿಕ್ಷಕನ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಮಾಡಲು ಮುಂದಾದ ಶಿಷ್ಯವಂದದ ಕಾಯಕ ನಿಜಕ್ಕೂ ಹೆಮ್ಮೆಯ ವಿಷಯ. ನಾನು ಕೂಡ 51 ಸಾವಿರ ರೂ. ನೀಡುವೆ ಎಂದು ಭರವಸೆ ನೀಡಿದರು.

ಮರೇಗುದ್ದಿಯ ಗುರುಪಾದ ಶ್ರೀಗಳು, ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಮುತ್ತೂರ ಗ್ರಾಮದ ಗಿರೀಶ ದೇವರು, ಕೊಪ್ಪಳದ ಯಶವಂತ ಶರಣರು, ಶ್ರೀಶೈಲ ಹಿರೇಮಠ, ಕಾಶಿರಾಯ ಹಿಪ್ಪರಗಿ, ಮುತ್ತಣ್ಣ ಹಿಪ್ಪರಗಿ, ಶಿವಾನಂದ ಬಾಗಲಕೋಟಮಠ, ಶೇಖರ ನೀಲಕಂಠ, ಗುರು ಮರಡಿಮಠ, ದಾನಪ್ಪ ಆಸಂಗಿ, ಆನಂದ ಕಂಪು, ಹಣಮಂತ ಮಗದುಮ್, ಮಲ್ಲಪ್ಪ ಗಣಿ ಹಾಗೂ ಅಪಾರ ಶಿಷ್ಯ ಬಳಗದವರು ಇದ್ದರು. ಪ್ರಕಾಶ ಪಟ್ಟಣಶೆಟ್ಟಿ ನಿರೂಪಿಸಿದರು. ಬಸವರಾಜ ಮುಧೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net