ಸಮೀಕ್ಷೆ ಮುಗಿಸಿದ ಶಿಕ್ಷಕ ಗುಡೇನಕಟ್ಟಿಗೆ ಸನ್ಮಾನ

3 Dwd 7
Published on

ಧಾರವಾಡ: ನಿಗದಿತ ಅವಽಗಿಂತ ಮುಂಚಿತವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಮುಗಿಸಿದ ಗಣತಿದಾರ, ಶಿಕ್ಷಕ ಪಿ.ಎಫ್. ಗುಡೇನಕಟ್ಟಿ ಅವರನ್ನು ಜಿಲ್ಲಾಡಳಿತ ಮತ್ತು ಪಾಲಿಕೆಯಿಂದ ಶುಕ್ರವಾರ ಸನ್ಮಾನಿಸಲಾಯಿತು.

ಗುಡೇನಕಟ್ಟಿ ಅವರಿಗೆ ಧಾರವಾಡ ವ್ಯಾಪ್ತಿಯ ವಾರ್ಡ್ ನಂ. 7ರ 129 ಮನೆಗಳ ಗುರಿ ನೀಡಲಾಗಿತ್ತು. ಮಹಾವೀರ ನಗರ, ರಾಮರಹೀಮ್ ಕಾಲನಿಯ ಕರವೀರ ಕಾಲನಿ, ಆಜಾದ್ ಕಾಲನಿ, ಸಾಯಿ ಲೇಔಟ್, ಚರಂತಿಮಠ ಗಾರ್ಡನ್ ಹತ್ತಿರದ ಬ್ಲಾಕ್‌ನಲ್ಲಿ ಗಣತಿ ಪೂರ್ಣಗೊಳಿಸಿ ಶೇ. 100ರಷ್ಟು ಸಾಧನೆ ಮಾಡಿದ್ದಾರೆ,

ನಗರದ ಪಾಲಿಕೆಯ ಅಮೃತ ಮಹೋತ್ಸವ ಸಭಾಂಗಣದಲ್ಲಿ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಪಾಲಿಕೆ ವಲಯ ಸಹಾಯಕ ಆಯುಕ್ತ ಶಂಕರ ಪಾಟೀಲ, ಬಿಇಒ ಅಶೋಕ ಸಿಂದಗಿ, ಸಮನ್ವಯಾಽಕಾರಿ ಮಂಜು ಅಡವೇರ ಸನ್ಮಾನಿಸಿದರು. ಮೇಲ್ವಿಚಾರಕ ಜಿ.ಬಿ. ಶೆಟ್ಟರ್, ಸುಮಿತಾ ಹಿರೇಮಠ, ಎಸ್.ಬಿ. ಅರಮನಿ, ಎಂ.ಆರ್. ಕಬ್ಬೇರ, ಮಹೇಶ ಬಾಳಗಿ, ಆಸಿಫ್ ಸವಣೂರ ಹಾಗೂ ವಿ.ಎಂ. ಪಾಟೀಲ, ಇರ್ಫಾನ್ ಕವಲಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net