ಶಿಕ್ಷಕರಿಂದ ಸೌಲಭ್ಯ ದರ್ಬಳಕೆ ತಡೆಯಿರಿ

Sajjapura Villagers Appeal
ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಮಲ್ಲಿಕಾರ್ಜುನಗೆ ಸರ್ಜಾಪುರ ಗ್ರಾಮಸ್ಥರು ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡು ಗೈರಾದವರಿಗೂ ಹಾಜರಾತಿ ನೀಡಿ ಶಿಕ್ಷಣ ಇಲಾಖೆ ಸೌಲಭ್ಯ ದುರ್ಬಳಕೆ ಮಾಡುತ್ತಿರುವ ಶಿಕ್ಷಕರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಎಸಿ ಕಚೇರಿ ಎಫ್‌ಡಿಸಿ ಮಲ್ಲಿಕಾರ್ಜುನಗೆ ಸರ್ಜಾಪುರ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇರೆ ಜಿಲ್ಲೆಗಳ ಹಾಗೂ ಪಟ್ಟಣದಲ್ಲಿ ವಾಸಿಸುವ ಮಕ್ಕಳ ಹೆಸರು ನೋಂದಣಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಕೃಪಾಂಕ, 371(ಜೆ) ಮೀಸಲಾತಿ ಸೌಲಭ್ಯ ಕಲ್ಪಿಸಲು ಸಹಕಾರ ನೀಡಲಾಗುತ್ತಿದೆ. ಸರ್ಕಾರದಿಂದ ನೀಡುವ ಸಮವಸ್ತ್ರದ ಬಟ್ಟೆ, ಬೂಟು, ಬಿಸಿಯೂಟ ಸೌಲಭ್ಯ ಕಬಳಿಸಲಾಗುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net