ಕಣಜದ ಹುಳು ದಾಳಿಗೆ ಶಿಕ್ಷಕ ಮೃತ್ಯು

ವಿಜಯನ್
ವಿಜಯನ್
Published on

ಪ್ರಮುಖ ಮುಖ್ಯಾಂಶಗಳು

  • ಮಣ್ಣಿನ ಹುತ್ತದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು
  • ಕಣಜದ ಹುಳುಗಳ ದಾಳಿ

ಕಾಸರಗೋಡು:ತಮ್ಮ ಜಾಗವನ್ನುಸ್ವಚ್ಛಗೊಳಿಸುತ್ತಿದ್ದ ವೇಳೆಕಣಜದ ಹುಳುಗಳ ದಾಳಿಯಿಂದಶಿಕ್ಷಕರೊಬ್ಬರು ದಾರುಣವಾಗಿಮೃತಪಟ್ಟಿದ್ದಾರೆ.ಜಿಲ್ಲೆಯಬಳಾಂತೋಡು ಸರ್ಕಾರಿ ಹೈಯರ್ಸೆಕೆಂಡರಿ ಶಾಲೆಯ ಅಧ್ಯಾಪಕ,

ಕಾಞಂಗಾಡುಚಾಮುಂಡಿಕುನ್ನು ನಿವಾಸಿ ವಿಜಯನ್(56)ಮೃತಪಟ್ಟವರು.ಬುಧವಾರಬೆಳಗ್ಗೆ ತಮ್ಮ ಮನೆ ವಠಾರದಭೂಮಿಯನ್ನು ಕೆಲಸದವರ ಜತೆಸ್ವಚ್ಛಗೊಳಿಸುತ್ತಿರುವ ಮಧ್ಯೆವಿಜಯನ್ ಅವರ ಮೇಲೆ ಕಣಜದ ಹುಳ ದಾಳಿನಡೆಸಿದೆ.ಮಣ್ಣಿನಹುತ್ತದಲ್ಲಿ ಗೂಡು ಕಟ್ಟಿದ್ದಕಣಜದ ಹುಳುಗಳು ಗುಂಪಾಗಿಆಕ್ರಮಿಸಿದ್ದವು.

ತಕ್ಷಣ ಅವರನ್ನುಬಂದಡ್ಕದ ಖಾಸಗಿ ಆಸ್ಪತ್ರೆಗೆದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.ಇವರ ಜತೆಗಿದ್ದನಾಲ್ವರು ಕಾರ್ಮಿಕರೂ ಕಣಜದ ಹುಳುಕಡಿತಕ್ಕೊಳಗಾಗಿದ್ದು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.ವಿಜಯನ್ ಅವರುಈ ವರ್ಷ ಸೇವಾ ನಿವೃತ್ತಿ ಪಡೆಯುವಸಿದ್ಧತೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net