ಬೈಕ್‌ನಿಂದ ಬಿದ್ದು ಶಿಕ್ಷಕಿ ಸಾವು

MEGHA DEATH
Published on

ಹೊಳಲ್ಕೆರೆ: ತಾಲೂಕಿನ ಚಿಕ್ಕಜಾಜೂರು ಸಮೀಪ ಈಚೆಗೆ ಬೈಕ್‌ನಿಂದ ಬಿದ್ದು ಶಿಕ್ಷಕಿ ವಿ.ಕೆ.ಮೇಘಾ (28) ಮೃತಪಟ್ಟಿದ್ದಾರೆ. ಪತಿ ಸಂತೋಷ್ ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿ ಅಡ್ಡ ಬಂದಿದ್ದು, ತಕ್ಷಣ ಬ್ರೇಕ್ ಹಾಕಿದ್ದರಿಂದ ಹಿಂದೆ ಕುಳಿತಿದ್ದ ಮೇಘಾ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಚಿಕ್ಕಜಾಜೂರಿನ ಅಕ್ಷರ ವಿದ್ಯಾನಿಕೇತನದಲ್ಲಿ ಮೂರು ವರ್ಷದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net