ಶಿಕ್ಷಕರು ಮಕ್ಕಳಿಗೆ ಸ್ಫೂರ್ತಿಯಾಗಲಿ

8knk2
ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆ(ಪ್ರಾಥಮಿಕ ವಿಭಾಗ)ಯಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಶಿಕ್ಷಕ ತುಳಜಾ ನಾಯ್ಕ ಮಾತನಾಡಿದರು. ಶಿಕ್ಷಕರಾದ ವಿಮಲಾಬಾಯಿ ಜೋಶಿ, ನಾಗರತ್ನಾ, ಜ್ಯೋತಿ ಹಿರೇಮಠ, ಸಾವಿತ್ರಿ ನಾಯಕ, ರೇಣುಕಾ, ಸುರೇಖಾ ಇತರರಿದ್ದರು.
Published on

ಕನಕಗಿರಿ; ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ಎಲ್ಲ ವೃತ್ತಿಗಳಿಗೆ ತೆರಳುವವರು ಶಿಕ್ಷಕರಿಂದ ಕಲಿತ ವಿದ್ಯಾರ್ಥಿಗಳಾಗಿದ್ದರಿಂದ ಗುರುಗಳು ಕಾಯಕ ನಿಷ್ಠೆ ಮೆರೆಯಬೇಕು ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ತುಳಜಾ ನಾಯ್ಕ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ಶಾಲೆ)ಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿ ಎಲ್ಲರಿಗೂ ಸಿಗುವುದಿಲ್ಲ. ಮಗುವಿನ ಕಲಿಕಾ ಉನ್ನತಿಗೆ ಶಿಕ್ಷಕ ನಿರಂತರ ಶ್ರಮಿಸಿದ್ದೆ ಆದಲ್ಲಿ ಕೊನೆಗೊಂದು ದಿನ ಆ ವಿದ್ಯಾರ್ಥಿ ಉನ್ನತ ಹುದ್ದೆ ಅಲಂಕರಿಸಿ ಉತ್ತಮ ಜೀವನ ರೂಪಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ನಾನಾ ಕಾರ್ಯಗಳ ಒತ್ತಡಗಳ ನಡುವೆ ಶಾಲೆಯಲ್ಲಿನ ಶಿಕ್ಷಕರು ಮಕ್ಕಳಿಗೆ ಸ್ಪೂರ್ತಿಯಾಗಿ ಪಾಠ ಬೋಧನೆ ಮಾಡುವಂತಾದರೆ ಶಾಲೆ ಶೈಕ್ಷಣಿಕವಾಗಿ ಉನ್ನತಿಯಾಗಲಿದೆ ಎಂದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳು ಆಯೋಜಿಸಿದ್ದ ವಿವಿಧ ಆಟೋಟಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕರಾದ ವಿಮಲಾಬಾಯಿ ಜೋಶಿ, ನಾಗರತ್ನಾ, ಜ್ಯೋತಿ ಹಿರೇಮಠ, ಸಾವಿತ್ರಿ ನಾಯಕ, ರೇಣುಕಾ, ಸುರೇಖಾ, ಸಾನಿಯಾ, ರೂಪಾ ಭೂಸನೂರುಮಠ, ಹನುಮಂತರೆಡ್ಡಿ, ಸಹಾಯಕಿಯರಾದ ಸರಸ್ವತಿ, ಸಲ್ಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net