ಲಾಂಭಾಂಶ ನೀಡುವುದಾಗಿ ನಂಬಿಸಿ ಶಿಕ್ಷಕಿಗೆ 11.35 ಲಕ್ಷ ರೂ. ವಂಚನೆ

cen police station
Published on

ಶಿವಮೊಗ್ಗ: ಹೋಟೆಲ್ ರಿವೀವ್ ಕೊಟ್ಟರೆ ಹೆಚ್ಚಿನ ಲಾಂಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗ ರವೀಂದ್ರನಗರದ ಶಿಕ್ಷಕಿಯೊಬ್ಬರಿಗೆ ಬರೋಬ್ಬರಿ 11.35 ಲಕ್ಷ ರೂ. ವಂಚನೆ ಮಾಡಲಾಗಿದೆ.

ರವೀಂದ್ರನಗರದ 32 ವರ್ಷದ ಶಿಕ್ಷಕಿ ವಂಚನೆಗೆ ಒಳಗಾದವರು. ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ನೋಡುತ್ತಿದ್ದಾಗ ಶಿಕ್ಷಕಿಗೆ ಅಪರಿಚಿತ ಮೊಬೈಲ್ ನಂಬರ್‌ನಿಂದ ವಾಟ್ಸ್‌ಆ್ಯಪ್ ನಂಬರ್‌ಗೆ ಲಿಂಕ್ ಬಂದಿತ್ತು. ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಟೆಲಿಗ್ರಾಂ ಜಾಯಿನ್ ಆಗಿದ್ದು, ಮೌಸುಮಿ ಘೋಷ್636 ಹೆಸರಿನಿಂದ ಟಾಸ್ಕ್ ಲಿಂಕ್ ಕಳುಹಿಸಿ ಹೋಟೆಲ್ ರಿವೀವ್ ಕೊಡುವಂತೆ ಸೂಚಿಸಿದ್ದರು. ಅದಕ್ಕೆ ಲಾಂಭಾಂಶ ನೀಡುವುದಾಗಿ ನಂಬಿಸಿ ಆರ್‌ಟಿಜಿಎಸ್, ಐಎಂಪಿಎಸ್ ಮತ್ತು ಯುಪಿಐ ಮೂಲಕ ಹಂತ ಹಂತವಾಗಿ ವಂಚಕರು ಹಣ ಪಡೆದಿದ್ದರು. ದೊಡ್ಡ ಮೊತ್ತದ ಹಣ ಲಾಂಭಾಂಶ ನೀಡುವುದಾಗಿ ನಂಬಿಸಿ, ಹಣ ವಿತ್ ಡ್ರಾ ಮಾಡಲು 6 ಲಕ್ಷ ರೂ. ನೀಡಬೇಕೆಂದು ಹೇಳಿದ್ದರು. ಒಟ್ಟಾರೆ 11,35,900 ರೂ. ಹಂತ ಹಂತವಾಗಿ ವರ್ಗಾಯಿಸಿಕೊಂಡು ಶಿಕ್ಷಕಿಗೆ ವಂಚಿಸಲಾಗಿದೆ. ಈ ಬಗ್ಗೆ ಶಿಕ್ಷಕಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net