15ಕ್ಕೆ ಶಿಕ್ಷಕರ ಸಂಘದ ಚುನಾವಣೆ, 9 ಸದಸ್ಯ ಸ್ಥಾನಕ್ಕೆ 23 ಮಂದಿ ಸ್ಪರ್ಧೆ

web 1
Published on

ಮೂಡಿಗೆರೆ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 9 ಸದಸ್ಯ ಸ್ಥಾನಕ್ಕೆ ಡಿ.15ರಂದು ಚುನಾವಣೆ ನಡೆಯಲಿದೆ. ಮೂರು ಪ್ರತ್ಯೇಕ ತಂಡದಿಂದ 8 ಮಹಿಳಾ ಹಾಗೂ 15 ಪುರುಷರು ಒಟ್ಟು 23 ಶಿಕ್ಷಕರು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರಚಾರ ಬಿರುಸಾಗಿದ್ದು, ಮತದಾರ ಶಿಕ್ಷಕರನ್ನು ಓಲೈಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ತಾಲೂಕಿನ ಪ್ರಾಥಮಿಕ ಶಾಲೆಗಳ 426 ಶಿಕ್ಷಕರು ಮತ ಚಲಾಯಿಸಲಿದ್ದಾರೆ. ಡಿ.9ರಂದು ನಾಮಪತ್ರ ಸಲ್ಲಿಕೆಯಾಗಿತ್ತು. ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದಾಗ ಡಿ.ಎಚ್.ಸುರೇಶ್, ಪ್ರೇಮ್ುಮಾರ್, ಲಲಿತಮ್ಮ, ಜಯಕುಮಾರ್ ಆಚಾರ್ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ.

ಪಟ್ಟಣದ ಬಸ್ ನಿಲ್ದಾಣ ಸಮೀಪದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಡಿ.15ರಂದು ಚುನಾವಣೆ ನಡೆಯಲಿದೆ. ಅಂದೇ ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಪ್ರಭಾರ ಶಿಕ್ಷಣ ಸಮನ್ವಯಾಧಿಕಾರಿ ಶಿವನಂಜೇಗೌಡ ಚುನಾವಣಾಧಿಕಾರಿಯಾಗಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net