ಪೋಕ್ಸೋ ಕಾಯಿದೆ ಅಡಿ ಶಿಕ್ಷಕನ ಬಂಧನ

Published on

ಮೈಸೂರು: ನಗರದ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯದ ದೂರಿನ ಮೇರೆಗೆ ಪೋಕ್ಸೋ ಕಾಯಿದೆ ಅಡಿ ಶಿಕ್ಷಕನನ್ನು ಬಂಧಿಸಲಾಗಿದೆ.

ನಗರದ ಖಾಸಗಿ ಅನುದಾನಿತ ಶಾಲೆಯೊಂದರಲ್ಲಿ ತೋಟಗಾರಿಕೆ ಶಿಕ್ಷಕನಾಗಿರುವ ಶಿವಮೂರ್ತಿ ಬಂಧಿತ.ಈತನತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇವರ ವಿರುದ್ದ ವಿದ್ಯಾರ್ಥಿನಿಯರು ಶಾಲೆಯ ಮಹಿಳಾ ಶಿಕ್ಷಕಿಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಸಂಸ್ಥೆಯ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಕ್ರಮಕೈಗೊಳ್ಳದಿದ್ದಾಗ ವಿದ್ಯಾರ್ಥಿನಿಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಸಹಾಯವಾಣಿ ಆಪ್ತ ಸಹಾಯಕರ ಸಲಹೆ ಮೇರೆಗೆ ಮೈಸೂರು ಉತ್ತರ ವಲಯದ ಬಿಇಒ ರೇವಣ್ಣ ಅವರು ಶಾಲಾ ಶಿಕ್ಷಕನ ವಿರುದ್ಧ ವಿಜಯನಗರ ಠಾಣೆಗೆ ದೂರು ನೀಡಿದ್ದರು.

ಆಡಳಿತ ಮಂಡಳಿಗೆ ಸೂಚನೆ

ಬಿಇಒ ನೀಡಿರುವ ವರದಿಯ ಅನ್ವಯ ಶಾಲಾ ಶಿಕ್ಷಕ ಶಿವಮೂರ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳವಂತೆ ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ. ಆತನ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ವರದಿ ಬರಬೇಕಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಮಾಧ್ಯಮಕ್ಕೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net