

ಬೆಂಗಳೂರು: ಮಾಜಿ ಶಿಕ್ಷಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೆಪಿಸಿಸಿ(KPCC) ಪ್ರಧಾನ ಕಾರ್ಯದರ್ಶಿ ಬಿ.ಗುರಪ್ಪ ನಾಯ್ಡು ವಿರುದ್ಧ ಇಲ್ಲಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾರ್ಚ್ 2021 ರಿಂದ ಆಗಸ್ಟು 2024ರ ವರೆಗೆ ಶಾಲೆಯಲ್ಲಿ ಕೆಲಸ ಮಾಡಿದ 38 ವಯಸ್ಸಿನ ಶಿಕ್ಷಕಿ ದೂರು ನೀಡಿದ್ದಾರೆ. ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಮಹಿಳೆಯರು ನಿಂದನೆ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
''ಬಿ.ಗುರಪ್ಪ ನಾಯ್ಡು ನನ್ನನ್ನು ಪದೇಪದೆ ತಮ್ಮ ಕಚೇರಿಗೆ ಕರೆಸಿಕೊಳ್ಳುತ್ತಿದ್ದರು. ನನ್ನ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು. ನಾನು ವಿರೋಧಿಸಿದಾಗ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಅಲ್ಲದೆ, ವಿಡಿಯೋ, ಪೋಟೊಗಳನ್ನು ತೆಗೆದು ಹೆದರಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ''.
''ನಾಯ್ಡು ಅವರು ಆನೇಕ ದುರ್ಬಲ ಶಿಕ್ಷಕಿಯರನ್ನು ಗುರಿಯಾಗಿಸಿಕೊಂಡು ಶಾಲೆಯೊಳಗೆ ಭಯದ ವಾತಾವರಣ ಸೃಷ್ಠಿಸಿದ್ದಾರೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ. ಬಡ ಕುಟುಂಬದ ಹಿನ್ನೆಲೆ ಕೆಲ ಶಿಕ್ಷಕಿಯರು ಇವರ ವಿರುದ್ಧ ಮಾತನಾಡಲು ಹೆದರುತ್ತಾರೆ ಎಂದು ದೂರಿನಲ್ಲಿ ಹೇಳಲಾಗಿದೆ''. (ಏಜೆನ್ಸೀಸ್).