

ಮಡಿಕೇರಿ:
ಕೊಡಗಿನ ಭೌಗೋಳಿಕ ಸ್ಥಿತಿಗತಿಗೆ ಅನುಗುಣವಾಗಿ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ವಿನಾಯಿತಿ ನೀಡಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರೂ ಆದ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಮೂಲಕ ಅನುದಾನಿತ ಶಾಲೆಯ ಸಿಬ್ಬಂದಿ ವರ್ಗ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿರಾಜಪೇಟೆಯ ಗೃಹ ಕಚೇರಿಯಲ್ಲಿ ಪೊನ್ನಣ್ಣ ಆವರನ್ನು ಭಾನುವಾರ ಭೇಟಿ ಮಾಡಿದ ಅನುದಾನಿತ ಶಾಲೆಯ ಸಿಬ್ಬಂದಿ ವರ್ಗ ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅನುದಾನಿತ ವಿದ್ಯಾಸಂಸ್ಥೆಗಳು ಕಳೆದ ಹಲವು ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ ಈಗ ಈ ಸುಸಜ್ಜಿತ ಕನ್ನಡ ಅನುದಾನಿತ ಶಾಲೆಗಳು ಒಂದರ ಹಿಂದೊAದರAತೆ ಬಾಗಿಲು ಮಚ್ಚುತ್ತಿವೆ. ಪ್ರತಿ ತರಗತಿಯಲ್ಲಿ ಕಡ್ಡಾಯವಾಗಿ ಕನಿಷ್ಠ 25ವಿದ್ಯಾರ್ಥಿಗಳು ಇರಲೆಬೇಕೆಂಬ ರಾಜ್ಯ ಶಿಕ್ಷಣ ಇಲಾಖೆಯ ನಿಯಮ ಜಾರಿಯಲ್ಲಿದ್ದು ಅಡಳಿತ ಮಂಡಳಿ ಮತ್ತು ಶಾಲಾ ಶಿಕ್ಷಕ ವೃಂದ ಹೇಗೊ ಶ್ರಮಿಸಿ ಪೋಷಕರ ಮನವೊಲಿಸಿ ತಮ್ಮ ಸ್ವಂತ ಹಣದಿಂದ ಮತ್ತು ದಾನಿಗಳ ನೆರವಿನಿಂದ ಶಾಲೆಗೆ ಹೋಗಿ ಬರಲು ವಾಹನದÀ ವ್ಯವಸ್ಥೆ ಮಾಡಿ, ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿ ದಾಖಲಾತಿಯನ್ನು 25ರ ಗಡಿ ದಾಟಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅದರೆ ಶಿಕ್ಷಣ ಪಡೆಯುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಶ್ರಮಿಕ ವರ್ಗದವರಾಗಿದ್ದು ಹತ್ತು ಹಲವು ಸಾಮಾಜಿಕ ಕಾರಣಗಳಿಂದ ಇವರು ವಾರದ ಎಲ್ಲಾ ದಿನಗಳಂದು ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅದರೆ ಕೊಡಗು ಜಿಲ್ಲಾ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಾಲೆಗಳಿಗೆ ಭೇಟಿ ನೀಡುವ ದಿವಸ ತರಗತಿವಾರು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 25ಕ್ಕಿಂತ ಹೆಚ್ಚು ಇದ್ದು, 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಅ ದಿವಸ ಹಾಜರಿದ್ದರೆ ಅಂಥ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿ ಶಿಕ್ಷಕರ ವೇತನ ತಡೆಹಿಡಿಯುವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು ಇಲ್ಲಿನ ಭೌಗೊಳಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಅನುಗುಣವಾಗಿ ಜಿಲ್ಲೆಯ ಅನುದಾನಿತ ಶಾಲೆಗಳಿಗೆ ದಾಖಲಾತಿ ಮತ್ತು ಹಾಜರಿತಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಮಟ್ಟಿಗೆ ತರಗತಿವಾರು ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ವಿನಾಯಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಪೊನ್ನಣ್ಣ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಳ ಗೈರು ಹಾಜರಿ ಸಮಸ್ಯೆ ಇದ್ದು ಇದನ್ನು ಶಿಕ್ಷಕರಿಂದ ಮಾತ್ರ ಸರಿಪಡಿಸಲು ಸಾಧ್ಯವಿಲ್ಲ ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಹಾಜರಾತಿಯನ್ನು ಸರಿಪಡಿಸುವುದು ಅನಿವಾರ್ಯವಾದರೂ ಇದಕ್ಕೆ ಶಿಕ್ಷಕರನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ ಮತ್ತು ಜಿಲ್ಲೆಯ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿರುವುದರಲ್ಲಿ ಶಿಕ್ಷಕರ ಶ್ರಮ ಶ್ಲಾಘನೀಯ ಎಂದರಲ್ಲದೆ ಶಿಕ್ಷಕರ ವೇತವನ್ನು ತೆಡೆಹಿಡಿಯುವ ಕಾರ್ಯಕ್ಕೆ ಮುಂದಾಗದAತೆ ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದರು.
ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜು ಮಾತನಾಡಿ ಕೊಡಗಿನಲ್ಲಿ ಕನ್ನಡ ಅನುದಾನಿತ ಶಾಲೆಗಳನ್ನು ಮುಚ್ಚಲು ಇಲಾಖೆಗೆ ಶಿಫಾರಸ್ಸು ಮಾಡುವ ಮುನ್ನ ಕೊಡಗಿನ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಸಕದ್ವಯರ ಗಮನಕ್ಕೆ ತರುವುದು ಒಳ್ಳೆಯದು ಎಂದರು.
ಕುಟ್ಟಂದಿ ಪ್ರೌಢಶಾಲೆಯ ಅಡಳಿತ ಮಂಡಳಿ ಉಪಾಧ್ಯಕ್ಷ ಕೊಲ್ಲೀರ ಬೋಪಣ್ಣ ನೇತೃತ್ವದಲ್ಲಿ ಶಾಸಕರನ್ನು ಭೇಟಿ ಮಾಡಿದ ನಿಯೋಗದಲ್ಲಿ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಗಿಡ್ಡಯ್ಯ, ಸಹಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮೆºಬೂಬ್, ತಾಲೂಕು ಅಧ್ಯಕ್ಷ ಕೃಷ್ಣ ಚೈತನ್ಯ, ಶಿವಪ್ರಸಾದ್, ಮುಖ್ಯ ಶಿಕ್ಷಕರುಗಳಾದ ದೀಪಾ, ಲೋಕೇಶ್, ರಾಧಾ, ಕಿಶೋರ್, ರತ್ನಮ್ಮ, ಸಿದ್ದರೂಢ ತಳವಾರ್, ತಿಮ್ಮಯ್ಯ ಮತ್ತಿತರರು ಇದ್ದರು.