

ರಬಕವಿ-ಬನಹಟ್ಟಿ: ಬಸವೇಶ್ವರರು ರಚಿಸಿದ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವರ ವಚನಗಳನ್ನು ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಗಮನ ನೀಡಬೇಕು ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ತಿಳಿಸಿದರು.
ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಬುಧವಾರ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಮತ್ತು ಪಲ್ಲಕ್ಕಿ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್‌ಆರ್‌ಎ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಸಿದ್ಧರಾಮ ಖಾನಾಪುರ ಮಾತನಾಡಿ, ಬಸವಣ್ಣ ಅನುಭವ ಮಂಟಪದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿದ್ದರು. ಶರಣ ಸಾಹಿತ್ಯ ವಿಶ್ವದಲ್ಲಿಯೇ ಶ್ರೇಷ್ಠ ಸಾಹಿತ್ಯವಾಗಿದೆ. ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಿದ ವಚನ ಪಿತಾಮಹ ಡಾ. .ಗು. ಹಳಕಟ್ಟಿಯವರನ್ನು ನಾವು ಈ ಸಂದರ್ಭದಲ್ಲಿ ಸ್ಮರಣೆ ಮಾಡಿಕೊಳ್ಳಬೇಕು ಎಂದರು.
ಬಸವೇಶ್ವರರ ಪಲ್ಲಕ್ಕಿ ಸೇವೆ ಮತ್ತು ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ನಡೆಯಿತು.
ಮಹಾಂತ ದೇವರು, ಬಸವ ಸಮಿತಿ ಅಧ್ಯಕ್ಷ ಶಂಕರ ಹೋಳಗಿ, ಉಪಾಧ್ಯಕ್ಷ ಮಹೇಶ ಬಂಡಿಗಣಿ, ಸಂಜಯ ಬರಗಲ, ಕಾರ್ಯದರ್ಶಿ ಶ್ರೀಶೈಲ ಮಡಿವಾಳರ, ಗುರುಸಿದ್ದಪ್ಪ ಚನಾಳ, ಶಿವಲಿಂಗ ಕರಲಟ್ಟಿ, ಪ್ರಕಾಶ ಬುರುಡ, ರಮೇಶ ಮಂಡಿ, ಚಂದ್ರು ಕುಲಗೋಡ, ಅಶೋಕ ಇಟ್ನಾಳ, ಭೀಮಶಿ ಹಾದಿಮನಿ, ಡಾ. ಶಂಕರ ವಸ್ತ್ರದ, ಅಶೋಕ ವಸ್ತ್ರದ, ರಾಜಶೇಖರ ಸೋರಗಾಂವಿ, ಈರಣ್ಣ ಶಿರಹಟ್ಟಿ, ರಮೇಶ ಸುಲ್ತಾನಪೂರ, ಮಲ್ಲಪ್ಪ ಚಿಪ್ಪಾಡಿ, ಅಶೋಕ ಜೋರೆ, ವಿಠ್ಠಲ ಕಾಂಬಳೆ, ಶಂಕರ ನಾಗರಾಳ, ಈರಣ್ಣ ಬಾಣಕಾರ, ಮಲ್ಲಿಕಾರ್ಜುನ ಜಾಲಿಕಟ್ಟಿ, ಪ್ರಕಾಶ ಬರಗಲ್ಲ, ರಾಜು ಸಾರವಾಡ, ರಾಮಚಂದ್ರ ಹಾಸಿಲಕರ, ಚನಬಸಯ್ಯ ಪೂಜಾರಿ, ಬಸವಂತಪ್ಪ ಬಾಣಕಾರ, ಶಿವಾನಂದ ಬರಗಲ, ಬಸವರಾಜ ಚನಾಳ, ರವಿ ಗೆದ್ದೆಪ್ಪನವರ ಮತ್ತಿತರರಿದ್ದರು.