ಓದು-ಬರೆಯುವುದು ರೂಢಿಯಾಗಿಸಿ-ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಆಶಯ

15tvg4
ತಾವರಗೇರಾದಲ್ಲಿ ಆಯೋಜಿಸಿದ್ದ ಎಕ್ಸಲೆಂಟ್ ಉತ್ಸವಕ್ಕೆ ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಚಾಲನೆ ನೀಡಿದರು. ಪಿಎಸ್‌ಐ ನಾಗರಾಜ, ಸಿಆರ್‌ಸಿ ಕಾಶೀನಾಥ, ಡಾ.ಚಂದ್ರಶೇಖರ್, ಅರುಣಾಕುಮಾರಿ, ಶಕೀಲಾ ಶೆಟ್ಟಿ , ಕೀರ್ತಿ, ಶ್ರುತಿ, ಕವಿತಾ ಇತರರಿದ್ದರು.
Published on

ತಾವರಗೇರಾ: ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಲದು. ಪಾಲಕರು ಮನೆಯಲ್ಲಿ ಅವರಿಗೆ ಓದು-ಬರೆಯುವುದನ್ನು ಕಡ್ಡಾಯವಾಗಿ ರೂಢಿಸಬೇಕೆಂದು ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.

ಇಲ್ಲಿನ ಎಕ್ಸಲೆಂಟ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಎಕ್ಸಲೆಂಟ್‌ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಅಕ್ಷರಾಭ್ಯಾಸ ಜತೆಗೆ ಅವರಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ನಂತರ ಮೇಘಾಲಯದ ಶಿಕ್ಷಕಿ ಅರೋನಾ, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪದಕ ವಿತರಿಸಿದರು. ಸಂಸ್ಥೆ ಅಧ್ಯಕ್ಷೆ ಅರುಣಾಕುಮಾರಿ ವಸ್ತ್ರದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಶಕೀಲಾ ಶೆಟ್ಟಿ ವರದಿ ವಾಚಿಸಿದರು. ನಂತರ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆದವು.

ಸ್ಥಳೀಯ ಠಾಣೆ ಪಿಎಸ್‌ಐ ನಾಗರಾಜ ಕೊಟಗಿ, ಸಿಆರ್‌ಸಿ ಕಾಶೀನಾಥ ನಾಗಲೀಕರ, ಸಾಹಿತಿ ಶೇಖರಗೌಡ ಸರನಾಯಕ, ಡಾ.ಚಂದ್ರಶೇಖರ ದಂಡಿನ, ಪಾಲಕರ ಪ್ರತಿನಿಧಿ ರಾಘವೇಂದ್ರ, ಕವಿತಾ ಗುಡಸಲಿ, ಶ್ರುತಿ, ಕೀರ್ತಿ ರಾಯ್ಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net