ಶಿಕ್ಷಣದ ಜತೆಗೆ ಜನಪದ ಸಂಸ್ಕೃತಿ ಕಲಿಸಿ

sri kajapa
ಶೃಂಗೇರಿಯಲ್ಲಿ ಕಜಾಪ ತಾಲೂಕು ಮಹಿಳಾ ಘಟಕದ ನೂತನ ಅಧ್ಯಕ್ಷೆ ಜ್ಯೋತಿ ಮಂಜುನಾಥ್ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್ ಪ್ರಮಾಣ ಪತ್ರ ನೀಡಿದರು. ಲತಾ, ರೇಣುಕಾ, ಉಮಾ, ಪ್ರಮೀಳಾ, ಆಶೀಶ್ ದೇವಾಡಿಗ ಇತರರಿದ್ದರು.
Published on

ಶೃಂಗೇರಿ: ಕನ್ನಡದ ಮಕ್ಕಳಾಗಿ ಭಾಷೆ ಉಳಿವಿಗಾಗಿ ನಾವು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಕನ್ನಡ ಸಂಬಂಧ ಬೆಸೆಯುವ ಭಾಷೆ. ಯುವಪೀಳಿಗೆಗೆ ಶಿಕ್ಷಣದ ಜತೆಗೆ ಜಾನಪದ ಸಂಸ್ಕೃತಿ ಕಲಿಸುವ ಅವಶ್ಯಕತೆ ಇದೆ. ಆದ್ದರಿಂದ ಎಲ್ಲ ಸಂಘ ಸಂಸ್ಥೆಗಳು ಒಂದಾಗಿ ನಾಡು, ನುಡಿ ಮತ್ತು ಜಾನಪದ ಸಂಸ್ಕೃತಿ ಉನ್ನತಿಗಾಗಿ ಶ್ರಮಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್ ಹೇಳಿದರು.

ಕಜಾಪ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಬಸವಣ್ಣ, ಸರ್ವಜ್ಞ, ಮಡಿವಾಳ ಮಾಚೀದೇವರು ಮುಂತಾದವರ ಸಾಹಿತ್ಯ, ಮಂಕುತಿಮ್ಮನ ಕಗ್ಗದಂಥ ಶ್ರೇಷ್ಠ ಸಾಹಿತ್ಯ ಜನಸಾಮಾನ್ಯರಿಗೆ ವಿಶಾಲ ದೃಷ್ಟಿ ನೀಡಿವೆ. ಜಾನಪದದ ಅಭಿಮಾನವನ್ನು ಮಕ್ಕಳಲ್ಲಿ ಬೆಳೆಸಿದಾಗ ಮಾತ್ರ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯ. ಸಾಹಿತ್ಯದ ಆಳ ಅರಿಯಲು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದಬೇಕು ಎಂದರು.
ಕಜಾಪ ತಾಲೂಕು ಘಟಕದ ಅಧ್ಯಕ್ಷ ಆಶೀಶ್ ದೇವಾಡಿಗ ಮಾತನಾಡಿ, ಜಾನಪದ ಸಂಸ್ಕೃತಿಯಲ್ಲಿ ಆಡಂಬರವಿಲ್ಲ, ಸಂಭ್ರಮವಿದೆ. ಅದು ಜ್ಞಾನದ ಕಣಜ. ಆಧುನಿಕ ಸೊಗಡಿನಲ್ಲಿ ತಾಯಿಬೇರಾದ ಜಾನಪದ ಮೌಲ್ಯಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಸರ್ವರ ಮೇಲಿದೆ ಎಂದು ಹೇಳಿದರು.
ಕಜಾಪ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜ್ಯೋತಿ ಮಂಜುನಾಥ್(ಅಧ್ಯಕ್ಷೆ), ರೇಣುಕಾ ರಾಮಪ್ಪ (ಪ್ರಧಾನ ಕಾರ್ಯದರ್ಶಿ), ಉಮಾ ಚಂದ್ರಶೇಖರ್(ಸಹಕಾರ್ಯದರ್ಶಿ), ಪ್ರಮೀಳಾ ರಮೇಶ್, ಲತಾ ಪ್ರಶಾಂತ್ (ಕೋಶಾಧ್ಯಕ್ಷರು), ಲತಾ ಶ್ರೀನಿವಾಸ್, ಜಯಂತಿ ಮಂದಾರ (ಉಪಾಧ್ಯಕ್ಷರು), ಸೌಗಂಧಿ ಕಾಡಪ್ಪಗೌಡ, ಸುಷ್ಮಾ ಸುರೇಂದ್ರ (ಗೌರವ ಕೋಶಾಧ್ಯಕ್ಷೆ), ಸುನೀತಾ ನವೀನ್‌ಗೌಡ, ಸೌಮ್ಯಾ ವಿಜಯ್‌ಕುಮಾರ್(ಗೌರವ ಸಲಹೆಗಾರರು), ಜಾನಕಿ ಉದಯ್‌ಕುಮಾರ್, ಶಿಲ್ಪಾ ಚಂದ್ರು, ಜಲಜಾ ಚಂದ್ರು, ವನಜಾಕ್ಷಿ (ಸಂಯೋಜಕಿ), ಅಂಕಿತಾ, ಹೇಮಶ್ರೀ (ಪತ್ರಿಕಾ ಪ್ರತಿನಿಧಿಗಳು) ಆಯ್ಕೆಯಾದರು.
ಕಜಾಪ ತಾಲೂಕು ಘಟಕದ ಕಾರ್ಯದರ್ಶಿ ಶೂನ್ಯ ರಮೇಶ್, ಪದಾಧಿಕಾರಿಗಳಾದ ರೇವಂತ್, ಅನಿಲ್, ಪ್ರಶಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net