ಮಕ್ಕಳ ಮನಸ್ಥಿತಿ, ಸೂಕ್ಷ್ಮತೆ ಅರಿತು ಕಲಿಸಿ

1001357398
ತಾಲೂಕಿನ ಓಡನಹಳ್ಳಿ ಗ್ರಾಪಂ ವತಿಯಿಂದ ನಡೆಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಎ.ಮಂಜು ಉದ್ಘಾಟಿಸಿದರು.
Published on

ಹೊಳೆನರಸೀಪುರ : ಸ್ಥಳೀಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ಪೂರ್ತಿ ನೀಡುವ ಕೆಲಸವಾಗಬೇಕಿದೆ ಎಂದು ಅರಕಲಗೂಡು ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಓಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗನ್ನು ಸನ್ಮಾನಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಪಾಲಕರಲ್ಲೂ ಸಹ ಮಕ್ಕಳ ಭವಿಷ್ಯದ ಕಡೆಗೆ ಆಸಕ್ತಿ ಮೂಡಿರುವುದು ಒಳ್ಳೆಯ ಬೆಳವಣಿಗೆ. ಹಳ್ಳಿಮೈಸೂರು ಹೋಬಳಿಯ ವ್ಯಾಪ್ತಿಯಲ್ಲೇ ಇದೇ ಮೊದಲ ಗ್ರಾಪಂ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ. ಸಮಾಜಕ್ಕೆ ಸತ್ಪ್ರಜೆಯನ್ನಾಗಿಸಲು ಶಿಕ್ಷಕ ವರ್ಗದ ಕಾಳಜಿಯುತ ಕರ್ತವ್ಯ ಶ್ಲಾಘನೀಯ. ಹಿಂದೆ ಉನ್ನತ ವ್ಯಾಸಂಗಕ್ಕಷ್ಟೆ ಪ್ರಾಮುಖ್ಯತೆ ವಹಿಸುತ್ತಿದ್ದ ಕಾಲ ಇತ್ತು. ಇದೀಗ ಪೂರ್ವ ಪ್ರಾಥಮಿಕ ಹಂತದಲ್ಲೇ ಸ್ಪರ್ಧಾ ಮನೋಭಾವ ವಹಿಸಿ ಕಲಿಕೆಗೆ ಪ್ರೋತ್ಸಾಹಿಸುತ್ತೇವೆ. ಆದರೆ ಮಕ್ಕಳ ಮನಸ್ಥಿತಿ ಸೂಕ್ಷ್ಮತೆ ಅರಿತು ಕಲಿಸಲು ಮುಂದಾಗಬೇಕಿದೆ. ಎಂದರು.

ಸಮಾಜ ಸೇವಕ ಎ.ಸಿ.ಸೋಮಶೇಖರ್ ಮಾತನಾಡಿ, ತಾವು ಹಳ್ಳಿಮೈಸೂರು ಹೋಬಳಿಯ ನಾನಾ ಶಾಲೆಗಳಿಗೆ ದೇಣಿಗೆ ನೀಡಿದ್ದು, ರಾಮೇನಹಳ್ಳಿ ಬಡ ವಿದ್ಯಾರ್ಥಿನಿಯ ಮುಂದಿನ 4 ವರ್ಷದ ವ್ಯಾಸಂಗದ ಶುಲ್ಕವನ್ನು ತಾವೇ ಭರಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಸೋಮಶೇಖರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶ್ರುತಿ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯ ಆರ್.ಎಂ.ಕುಮಾರ್, ತಾಪಂ ಇಒ ಮುನಿರಾಜ್ ಹಾಗೂ ಪಿಡಿಒ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net