ಶರಣರ ಸಂದೇಶಗಳನ್ನು ಮಕ್ಕಳಿಗೆ ಕಲಿಸಿ

5KDR4
ಕಡೂರಿನ ಕಾಮೇನಹಳ್ಳಿಯಲ್ಲಿ ಆಯೋಜಿಸಿದ್ದ ಶ್ರಾವಣ ನುಡಿಸಿರಿ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನ ಪ್ರಭುಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಅವರನ್ನು ಗೌರವಿಸಿದರು. ಎಂ.ಆರ್.ಪ್ರಕಾಶ್, ಷಣ್ಮುಖಪ್ಪ, ಪುಟ್ಟರಾಜು, ಬಸವರಾಜಪ್ಪ, ಕೆ.ವಿರೂಪಾಕ್ಷಪ್ಪ ಮತ್ತಿತರಿದ್ದರು.
Published on

ಕಡೂರು: ಪ್ರಸ್ತುತ ಎಲ್ಲರೂ ಚಿಂತೆಯ ಸಂತೆಯಲ್ಲಿ ಬದುಕುತ್ತಿದ್ದು, ಚಿಂತೆಯಿಲ್ಲದ ಮನುಷ್ಯನಿಗೆ ಶಿವ ಶರಣರ ಆಶಯಗಳೇ ಸ್ಪೂರ್ತಿಯಾಗಿವೆ ಎಂದು ಯಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಸಿರಿಗನ್ನಡ ವೇದಿಕೆಯಿಂದ ನಡೆದ ಶ್ರಾವಣ ನುಡಿ ಸಿರಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಇವತ್ತಿನ ದಿನ ಮನೆಯಲ್ಲಿ ಮಕ್ಕಳಿಗೆ ಶಿವ ಶರಣ ಬಗ್ಗೆ ಬಸವಾದಿ ಶರಣರ ಸಂದೇಶಗಳನ್ನು ಅರ್ಥೈಸಬೇಕಿದೆ. ಹಳ್ಳಿಗಳಲ್ಲಿ ಸಂಸ್ಕಾರ ಹಾಳಾಗಿಲ್ಲ ಅದನ್ನ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡದಲ್ಲೇ ಓದಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಂಸ್ಕೃತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಅದನ್ನ ಮುನ್ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕನ್ನಡತನ ಬದುಕು ನೀಡುವ ಭಾಷೆ ಎಂದರು.
ಚಿಂತಕ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿದರು. ಸಿರಿಗನ್ನಡವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ , ಗ್ರಾಪಂ ಸದಸ್ಯ ಕೆ.ಎಸ್.ಷಣ್ಮುಖಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಮೂರ್ತಿ, ರವಿ, ತಾಲೂಕು ಅಧ್ಯಕ್ಷ ಬಸವರಾಜಪ್ಪ, ಸಾಹಿತಿ ಹೊಸೂರು ಪುಟ್ಟರಾಜು, ರಾಮಚಂದ್ರಪ್ಪ, ರಾಜಪ್ಪ, ಮಧು, ಪುನೀತ್, ಮಧು ಕಿರಣ್, ಕಾಮೇನಹಳ್ಳಿ ಯೋಗೀಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net