ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣದ ಮಹತ್ವ ತಿಳಿಸಿ

ಬನ್ನೂರು ಬಸ್‌ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ರಾಜಯೋಗ ಭವನಕ್ಕೆ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ ಭೂಮಿಪೂಜೆ ನೆರವೇರಿಸಿದರು. ವೈ.ಎಸ್.ರಾಮಸ್ವಾಮಿ, ವೈ.ಎನ್.ಶಂಕರೇಗೌಡ, ಪ್ರಭಾಮಣಿಜೀ, ಬಿ.ಸಿ.ಪಾರ್ಥಸಾರಥಿ ಇದ್ದರು.
ಬನ್ನೂರು ಬಸ್‌ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ರಾಜಯೋಗ ಭವನಕ್ಕೆ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ ಭೂಮಿಪೂಜೆ ನೆರವೇರಿಸಿದರು. ವೈ.ಎಸ್.ರಾಮಸ್ವಾಮಿ, ವೈ.ಎನ್.ಶಂಕರೇಗೌಡ, ಪ್ರಭಾಮಣಿಜೀ, ಬಿ.ಸಿ.ಪಾರ್ಥಸಾರಥಿ ಇದ್ದರು.
Published on

ಬನ್ನೂರು: ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವುದರ ಜತೆಗೆ ಆಧ್ಯಾತ್ಮಿಕ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವುದು ಅವಶ್ಯಕ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೈ.ಎಸ್.ರಾಮಸ್ವಾಮಿ ಹೇಳಿದರು.

ಪಟ್ಟಣದ ಬಸ್‌ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಾಜಯೋಗ ಭವನಕ್ಕೆ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ  ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.

ಜನರಲ್ಲಿ ಮಾನವೀಯ ಮೌಲ್ಯ ಬಿತ್ತುವ ನಿಟ್ಟಿನಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ಕೆಲಸ ನಿರ್ವಹಿಸುತ್ತಿದೆ. ಪಟ್ಟಣದಲ್ಲಿ ಇಂತಹ ಭವನ ನಿರ್ಮಾಣವಾಗುತ್ತಿರುವುದು ಮನುಕುಲದ ಜಾಗೃತಿಗೆ ಪೂರಕವಾಗಿದ್ದು, ಎಲ್ಲರು ಇಂತಹ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡಬೇಕು ಎಂದರು.

ಸಕಾರಾತ್ಮಕ ಚಿಂತನೆಗೆ ರಾಜಯೋಗ ಭವನ ದಾರಿ ಮಾಡುಕೊಡುವುದರ ಜತೆಗೆ ಉತ್ತಮ ಸಂದೇಶವನ್ನು ಜನರಿಗೆ ತಲುಪಿಸುತ್ತದೆ ಎನ್ನುವಂತ ನಂಬಿಕೆ ಇದೆ ಎಂದು ತಿಳಿಸಿದರು.

ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಎಷ್ಟೇ ವಿಶ್ವವಿದ್ಯಾಲಯಗಳಿದ್ದರೂ ದ್ವೇಶ , ಕ್ರೌರ್ಯ, ಅಸೂಯೆ, ಹಿಂಸೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಶಿಕ್ಷಣ ನಮ್ಮಲ್ಲಿ ಸಿಗುತ್ತಿಲ್ಲ ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ, ಪ್ರಭಾಮಣಿಜೀ, ಬಿ.ಸಿ.ಪಾರ್ಥಸಾರಥಿ, ಮಹದೇವಸ್ವಾಮಿ, ಶೋಭಸತೀಶ್, ದಾನೇಶ್ವರಿಜೀ, ಬಿ.ಕೆ.ರಂಗನಾಥ್, ಬಿ.ಕೆ.ರಾಮಚಂದ್ರರಾವ್, ಬಿ.ಕೆ.ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net