ಮಕ್ಕಳಿಗೆ ಸಂಸ್ಕಾರ ಕಲಿಸಿ

vara maha
ಎನ್.ಆರ್.ಪುರ ತಾಲ್ಲೂಕು ಕುದುರೇಗುಂಡಿ ಅಶ್ವಗುಂಡೇಶ್ವರ ದೇವಸ್ಥಾನದಲ್ಲಿ ಸನಾತನ ಹಿಂದೂ ಪರಿಷತ್ ವತಿಯಿಂದ ಸಮಾನ ಸಂಸ್ಕಾರ ಅಭಿಯಾನದಡಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿಸಲಾಯಿತು.
Published on

ಎನ್.ಆರ್.ಪುರ: ಜೀವನದ ಮೌಲ್ಯ ಕಳೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸಂಸ್ಕಾರ ಅಗತ್ಯ. ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಪಾಲಕರು, ಗುರು ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಬೇಕು ಎಂದು ಕುದುರೆಗುಂಡಿ ಪುರೋಹಿತ ರಘುವೀರ್ ಗುರ್ಜರ್ ತಿಳಿಸಿದರು.

ಭಾನುವಾರ ಕುದುರೆಗುಂಡಿ ಅಶ್ವ ಗುಂಡೇಶ್ವರ ದೇವಸ್ಥಾನದಲ್ಲಿ ಸನಾತನ ಹಿಂದು ಪರಿಷತ್ ಆಶ್ರಯದಲ್ಲಿ ಸಮಾನ ಸಂಸ್ಕಾರ ಅಭಿಯಾನದಡಿ ಏರ್ಪಡಿಸಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯಲ್ಲಿ ಮಾತನಾಡಿ, ವರಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು ಎಂದು ಹೇಳಿದರು. ಸನಾತನ ಹಿಂದು ಪರಿಷತ್ ಜಿಲ್ಲಾ ಸಂಚಾಲಕ ಸಾಲೇಸಿಮಕ್ಕಿ ಚೇತನ, ಕುದುರೆಗುಂಡಿ ಶಾಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net