

ಕಳಸ: ಕಳಸ ಕಲ್ಲುಭಾವಿ ಅಂಗನವಾಡಿ ಕೇಂದ್ರದಿಂದ ಅಂಗನವಾಡಿ ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆ ಮತ್ತು ಮಹಿಳಾ ದಿನಾಚರಣೆ ಆಚರಿಸಲಾಯಿತು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷೆ ಸಾವಿತ್ರಿ ಜೋಷಿ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ಕೊಟ್ಟಾಗ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮೊದಲು ಮಕ್ಕಳಿಗೆ ನಮ್ಮ ಮನೆಯಲ್ಲಿ ಸಂಸ್ಕಾರವನ್ನು ಕಲಿಸಿ. ಮಕ್ಕಳಿಗೆ ಆದಷ್ಟು ಹೊರಗಡೆ ಆಹಾರ ಕೊಡುವುದಕ್ಕಿಂತ ಮನೆಯಲ್ಲಿಯೇ ತಯಾರಿಸಿದ ಆಹಾರ ನೀಡಿ ಅವರ ಆರೋಗ್ಯ ಕಾಪಾಡಿಕೊಳ್ಳಿ.ಆದಷ್ಟು ಸಣ್ಣ ಮಕ್ಕಳಿನ್ನು ಮೊಬೈಲ್‌ಗಳಿಂದ ದೂರ ಇಡಲು ಪ್ರಯತ್ನಿಸಿ ಎಂದು ಹೇಳಿದರು.
ಕಳಸ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ, ಮನೆಯಲ್ಲಿ ಒಂದೆರಡು ಮಕ್ಕಳನ್ನು ಸಂಬಾಳಿಸಲು ಕಷ್ಟವಾಗುತ್ತದೆ. ಅದರೆ ಒಂದು ಅಂಗವಾಡಿ ಕೇಂದ್ರದಲ್ಲಿ 40 ಮಕ್ಕಳನ್ನು ಸಂಬಾಳಿಸುವುದು ಸುಲಭದ ಕೆಲಸವಲ್ಲ. ರಾಜ್ಯಮಟ್ಟದಲ್ಲಿ ಈ ಅಂಗನವಾಡಿ ಗುರುತಿಸಿಕೊಳ್ಳಲು ಇಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಪಾಲಕರು ಹಾಗೂ ದಾನಿಗಳು ಕಾರಣ ಎಂದು ಹೇಳಿದರು.
ಕಳಸ ಗ್ರಾಪಂ ಉಪಾಧ್ಯಕ್ಷ ಭಾಸ್ಕರ್, ಪಾಲಕರಾದ ಸಂದೇಶ್, ಉದಯ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಹಸೀನ, ಪ್ರಬೋನಿಧಿ ವಿದ್ಯಾ ಕೇಂದ್ರದ ಶಿಕ್ಷಕಿ ಸರಸ್ವತಿ, ಕೆಪಿಎಸ್ ಶಾಲಾ ಶಿಕ್ಷಕಿ ಯಶೋಧ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಪವಿತ್ರ, ಶೋಭ ಇತರರು ಇದ್ದರು.