ಮಕ್ಕಳಿಗೆ ಸಂಸ್ಕಾರ, ವಿನಯತೆ ಕಲಿಸಿ

lng colleage
ಲಿಂಗಸುಗೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಬಡ್ತಿ ಮುಖ್ಯಶಿಕ್ಷಕರು, ನಿವೃತ್ತ ಮುಖ್ಯಶಿಕ್ಷಕರಿಗೆ ಗೌರವ ಹಾಗೂ ನೂತನ ಬಡ್ತಿ ಮುಖ್ಯಗುರುಗಳ ಸಂಘದ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಯರಡೋಣದ ಮುರುಘೇಂದ್ರ ಶಿವಯೋಗಿಗಳು ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರ್ಟಿನ್ ಅಮಲ್‌ರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರು ಸಂಗಯ್ಯ ಗಣಾಚಾರಿ ಇತರರಿದ್ದರು.
Published on

ಲಿಂಗಸುಗೂರು: ಸಣ್ಣ ವೃತ್ತಿಯಿಂದ ಹಿಡಿದು ಪ್ರಧಾನಮಂತ್ರಿಯಂಥ ಹುದ್ದೆಗೇರಲು ಒಬ್ಬ ಗುರು ಬೇಕು. ಶಿಕ್ಷಕರ ವೃತ್ತಿ ಅಷ್ಟು ಮಹತ್ವದ್ದಾಗಿದೆ ಎಂದು ಯರಡೋಣದ ಶ್ರೀ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳು ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಬಡ್ತಿ ಮುಖ್ಯಶಿಕ್ಷಕರು, ನಿವೃತ್ತ ಮುಖ್ಯಶಿಕ್ಷಕರಿಗೆ ಗೌರವ ಹಾಗೂ ನೂತನ ಬಡ್ತಿ ಮುಖ್ಯಗುರುಗಳ ಸಂಘದ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಗುರುಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ವಿನಯತೆ ಕಲಿಸಬೇಕು. ಸಂಘಟನೆ ಹೋರಾಟದ ಜತೆಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಶಿಕ್ಷಕರು ಕಲಿಸುವ ವಿಷಯವನ್ನು ಹೆಚ್ಚು ಪ್ರೀತಿಸಬೇಕು. ವೃತ್ತಿಯನ್ನು ಗೌರವಿಸಬೇಕು. ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಬೇಕು. ಇದರಿಂದ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.

ಬಡ್ತಿ ಮುಖ್ಯಗುರುಗಳ ಸಂಘದ ತಾಲೂಕು ಅಧ್ಯಕ್ಷ ಅಮರಪ್ಪ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಾರ್ಟಿನ್ ಅಮಲ್‌ರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರು ಸಂಗಯ್ಯ ಗಣಾಚಾರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಮರೇಶಪ್ಪ ಹೂನೂರು, ನೌಕರರ ಸಂಘದ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಭೀಮಣ್ಣ ನಾಯಕ, ಸೋಮಶೇಖರ ಬಳಗಾನೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net