

ಎನ್.ಆರ್.ಪುರ: ಶಾಲೆಯಲ್ಲಿ ಶಿಕ್ಷಣದ ಜತೆಗೆ ಮೌಲ್ಯಾಧಾರಿತ ಬೌದ್ಧಿಕ ಜ್ಞಾನವನ್ನೂ
ಮಕ್ಕಳಿಗೆ ಕಲಿಸಲಾಗುತ್ತಿದೆ ಎಂದು ಶ್ರೀಜ್ವಾಲಾಮಾಲಿನಿ ದೇವಿ ಆಂಗ್ಲ ಮಾಧ್ಯಮ
ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಸುನೀಲ್‌ಕುಮಾರ್ ಹೇಳಿದರು.
ಪಟ್ಟಣದ ಶ್ರೀಜ್ವಾಲಾಮಾಲಿನಿ ದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ
ಗ್ರ್ಯಾಜುಯೇಷನ್ ಡೇ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಡಳಿತ ಮಂಡಳಿ ಮಕ್ಕಳ
ಸವಾರ್ಂಗೀಣ ಬೆಳವಣಿಗೆಗೆ ಒತ್ತು ನೀಡಲಿದೆ ಎಂದರು.
ಶಿಕ್ಷಕ ಗುಣಪಾಲ್‌ಜೈನ್ ಮಾತನಾಡಿ, ಮೊದಲ ಹಂತವಾದ ಪೂರ್ವ ಪ್ರಾಥಮಿಕ
ಹಂತವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ತಿಳಿಸುವ
ಕಾರ್ಯಕ್ರಮವೇ ಗ್ರ್ಯಾಜುಯೇಷನ್ ಡೇ. ಈ ಹಂತದಲ್ಲಿ ಕೃಷಿಕ ಹೊಲವನ್ನು ಹಸನು
ಮಾಡಿ ಬೆಳೆ ಬೆಳೆಯಲು ತಯಾರಿ ನಡೆಸುವಂತೆ ಚಿಕ್ಕ ಮಕ್ಕಳನ್ನು ಅವರಿಗೆ ಧೈರ್ಯ,
ಸ್ಪೂರ್ತಿ ಆಶ್ವಾಸನೆ ತುಂಬಿ ಮುಂದಿನ ಅಕ್ಷರ ಜ್ಞಾನ ಬಿತ್ತಲು ತಯಾರಿ ನಡೆಸುವ ಹಂತ
ಇದಾಗಿದೆ. ನಿಮ್ಮ ಶಾಲಾ ಶಿಕ್ಷಣದ ಮುನ್ನುಡಿಗೆ ಕಾಲ ಪಕ್ಷವಾಗಿದೆ. ಭವಿಷ್ಯ ಅದೃಷ್ಟದ
ಕೈಯಲ್ಲಿದೆ ಎನ್ನುವ ಬದಲು ಭವಿಷ್ಯದ ಅದೃಷ್ಟದ ಬಾಗಿಲು ಶ್ರಮದ ಮೂಲಕ
ತೆರೆಯುವುದಿಲ್ಲ ಎಂದು ಮಕ್ಕಳಿಗೆ ಪಾಲಕರು ತಿಳಿಸಿಕೊಡಬೇಕು ಎಂದರು.
ಶಾಲಾ ಮುಖ್ಯಶಿಕ್ಷಕಿ ಎಚ್.ಎನ್.ಅವಿನ, ಶಾಲಾ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ
ನೀಡಿದರು. ಯುಕೆಜಿಯ ಎಲ್ಲ 27 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ
ಅಭಿನಂದಿಸಲಾಯಿತು. ಪಿಟಿಎ ಸಮಿತಿ ಅಧ್ಯಕ್ಷೆ ಸುನಿತಾ, ಸದಸ್ಯರಾದ ರಾಘು,
ಸಂದೀಪ್, ಶಿಕ್ಷಕಿ ಪ್ರಿನ್ಸಿ, ಎಲ್ಬಿ ಉಪಸ್ಥಿತರಿದ್ದರು.