ಭಾರತೀಯ ಸಂಪ್ರದಾಯ ಮಕ್ಕಳಿಗೆ ಕಲಿಸಿ

Teach children Indian traditions
ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಕಮರಿಮಠದ ಆವರಣದಲ್ಲಿ ಶರಣ ಬಸವೇಶ್ವರ ಶಾಲಾ ಮಕ್ಕಳಿಗೆ ಶ್ರೀಮಠದ ಶರಣಬಸವದೇವರು ಅಕ್ಷರಾಭ್ಯಾಸ ಕಾರ್ಯಕ್ರಮದಂಗವಾಗಿ ಪೂಜೆ ನೆರವೇರಿಸಿ, ಮಕ್ಕಳಿಗೆ ಅಕ್ಷರ ಬರೆಸಿ, ಶುಭ ಹಾರೈಸಿದರು.
Published on

ತೇರದಾಳ: ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂದರೆ ಅಕ್ಷರಾಭ್ಯಾಸ ಕಲಿಕೆಯಲ್ಲಿ ಭಾರತೀಯ ಸಂಪ್ರದಾಯ ಅನುಸರಿಸುವುದು ಬಹಳ ಮುಖ್ಯ ಎಂದು ಕಮರಿಮಠದ ಶರಣ ಬಸವದೇವರು ಹೇಳಿದರು.

ತಾಲೂಕಿನ ಹಳಿಂಗಳಿ ಗ್ರಾಮದ ಕಮರಿಮಠದ ಆಶ್ರಯದಲ್ಲಿ ನಡೆಯುವ ಶರಣ ಬಸವೇಶ್ವರ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುಕ್ರವಾರ ವಿನೂತನವಾಗಿ ಹಮ್ಮಿಕೊಂಡ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪದ್ಧತಿ ಪೂಜಾದಿಗಳನ್ನು ನೆರವೇರಿಸಿ, ಮಾತನಾಡಿ, ಪಾಲಕರು ಮಕ್ಕಳ ಶೈಕ್ಷಣಿಕ ಕಲಿಕೆಯೊಂದಿಗೆ ಮನೆಯಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ಸದಾ ನಿಗಾವಹಿಸಿ, ಸಾಂಪ್ರದಾಯಿಕ ಪದ್ಧತಿಗಳನ್ನು ರೂಢಿಸಿದರೇ ಉತ್ತಮ ನಾಗರಿಕನಾಗಲು ಸಾಧ್ಯವಾಗುತ್ತದೆ. ತನ್ಮೂಲಕ ಸದಢ ಸಮಾಜ ನಿರ್ಮಾಣದ ಜೊತೆಗೆ ದೇಶಕ್ಕೆ ನಿಮ್ಮ ಕೊಡುಗೆ ಅಪಾರವಾಗುತ್ತದೆ ಎಂದರು.

ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿಯವರು ಮಕ್ಕಳಿಗೆ ಅಕ್ಷರ ಬರೆಸುವುದರ ಮೂಲಕ ಕಾರ್ಯಕ್ರಮಕ್ಕೆ ಸರಳವಾಗಿ ಚಾಲನೆ ನೀಡಿದರು. ಮುಖ್ಯಗುರು ಸೋಮಶೇಖರ ಜಿ.ಎಸ್., ಶಿಕ್ಷಕರು, ಪಾಲಕರು ಇದ್ದರು. ವಿಶೇಷವಾಗಿ ಪಾಲಕರು ಬಿಳಿಧರಿಸಿನೊಂದಿಗೆ ದಂಪತಿ ಸಮೇತ ಆಗಮಿಸಿ, ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಹೇಳುವುದರ ಮೂಲಕ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net