

ನರಗುಂದ: ಶಿಕ್ಷಕರು ಉತ್ತಮ ನಡೆ, ನುಡಿಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರ ಸರ್ವಾಂಗೀಣ ಬದುಕನ್ನು ಉತ್ತಮಪಡಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ. ಜೋಗುಳೆ ಹೇಳಿದರು.
ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರಗುಂದ ತಾಲೂಕು ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಿಇಒ ಡಾ. ಗುರುನಾಥ ಹೂಗಾರ ಮಾತನಾಡಿ, ಜೀವನದಲ್ಲಿ ನಾವೆಲ್ಲ ಸಾಧನೆ ಮಾಡುವ ಪ್ರಮುಖ ಹಂತಗಳನ್ನು ರಚಿಸುವ ಮೂಲಕ ಮಕ್ಕಳ ಜೀವನದ ಯಶಸ್ಸನ್ನು ತಿಳಿಸಿ ಅವರಿಗೆ ನಾವೆಲ್ಲ ದಾರಿದೀಪಗಳಾಗಿ ಕೆಲಸ ಮಾಡಬೇಕು ಎಂದರು.
ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ ಮಾತನಾಡಿದರು. ರೋಟರ್ಯಾಕ್ಟ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜು ಕಲಾಲ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಐ.ವೈ. ಕುಂಬಾರ, ಎಫ್.ವಿ. ಶಿರುಂದಮಠ, ಪಿ.ವಿ. ಕೆಂಚನಗೌಡ್ರ, ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಕಾರ್ಯಾಗಾರದಲ್ಲಿದ್ದರು. ವಿ.ವಿ. ಕರಿಗಾರ, ವಿ.ಎಸ್. ಚಿಕ್ಕಮಠ ಹಾಗೂ ಎಫ್.ಬಿ. ಧರೆಯಣ್ಣವರ ನಿರ್ವಹಿಸಿದರು.