ಮಕ್ಕಳಿಗೆ ಶಿಕ್ಷಣ-ಸಂಸ್ಕಾರ ಕಲಿಸಿ

25 HRP 03
ಹರಪನಹಳ್ಳಿ ತಾಲೂಕು ಅರಸೀಕೆರೆ ಗ್ರಾಮದ ದಂಡಿನ ದುರ್ಗಮ್ಮ ದೇವಿ ನೂತನ ಗೋಪುರ ಕಲಶಾರೋಹಣ ಕಾರ್ಯಕ್ರಮದಲ್ಲಿ ರಾಮಘಟ್ಟ ಪುರವರ್ಗ ಮಠದ ರಾಜಗುರು ರೇವಣಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಶಾಸಕ ದೇವೇಂದ್ರಪ್ಪ, ಪ್ರಮುಖರಾದ ಕೆ.ಪಿ ಪಾಲಯ್ಯ, ಕಮ್ಮತ್ತಹಳ್ಳಿ ಮಂಜುನಾಥ, ಇನಾಯತ್‌ವುಲ್ಲಾ, ಪೂಜಾರ್ ಮರಿಯಪ್ಪ, ಹನುಮಂತಪ್ಪ, ಆನಂದಪ್ಪ ಇತರರಿದ್ದರು.
Published on

ಹರಪನಹಳ್ಳಿ: ದೇವಾಲಯಗಳು ಮನುಷ್ಯರಲ್ಲಿರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುವ ಪವಿತ್ರ ತಾಣವಾಗಿವೆ ಎಂದು ರಾಮಘಟ್ಟ ಪುರವರ್ಗ ಮಠದ ರಾಜಗುರು ರೇವಣಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಅರಸೀಕೆರೆ ಗ್ರಾಮದ ದಂಡಿನ ದುರ್ಗಮ್ಮ ದೇವಿ ನೂತನ ಗೋಪುರ ಕಲಶಾರೋಹಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ದೇವಸ್ಥಾನಗಳಿಗೆ ನಿತ್ಯ ಹೋಗಿ ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ದೈವತ್ವದ ಬಗ್ಗೆ ತಿಳಿಸಿ, ಶಿಕ್ಷಣ-ಸಂಸ್ಕಾರವನ್ನು ಕಲಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರದ್ದಾಗಿದೆ ಎಂದರು.

ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಪ್ರಮುಖರಾದ ಮಹೇಶ್ವರಪ್ಪ, ರಾಮಣ್ಣ, ಸಲಾಂ ಸಾಬ್, ಬಸಮ್ಮ, ಹನುಮಂತಪ್ಪ, ಶಿವಣ್ಣ, ಪಂಪಣ್ಣ, ಅದಾಮ್ ಸಾಬ್, ಷಣ್ಮುಖಪ್ಪ, ಮಹಾಂತೇಶ, ಲಕ್ಷ್ಮೀದೇವಿ, ಮೂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net