ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಸಿ

24sri-2 (1)
Published on

ಶೃಂಗೇರಿ: ನಾವು ಧರ್ಮವನ್ನು ಪಾಲಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಆಶ್ರಿತಾ ಸುಜಿತ್‌ರಾವ್ ಹೇಳಿದರು.

ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಮಹಿಳಾ ಘಟಕ ಆಯೋಜಿಸಿದ್ದ ತಾಲೂಕು ಮಟ್ಟದ ವಿಪ್ರ ಸಮಾವೇಶದಲ್ಲಿ ಮಹಿಳೆ ಮತ್ತು ಧಾರ್ಮಿಕ ಆಚರಣೆ ಕುರಿತು ಉಪನ್ಯಾಸ ನೀಡಿ, ಮಾನಸಿಕ ಹಾಗೂ ಕ್ರಿಯಾತ್ಮಕ ಎಂಬ ವಿಧಗಳು ಧರ್ಮದಲ್ಲಿದೆ. ದೇವರು ಇದ್ದಾನೆ ಎಂದು ನಂಬುವುದು ಮಾನಸಿಕ ಧರ್ಮ. ದೇವರಿಗೆ ಪ್ರತಿನಿತ್ಯ ಪೂಜಿಸುವುದು ಕ್ರಿಯಾತ್ಮಕ ಧರ್ಮ. ಸನಾತನ ಹಿಂದು ಸಂಸ್ಕೃತಿಯಲ್ಲಿ ಧರ್ಮದ ಆಚರಣೆಯಲ್ಲಿ ಸ್ತ್ರಿಯರಿಗೆ ಉತ್ಕೃಷ್ಠ ಸ್ಥಾನವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಪ್ರತಿರೂಪಿತವಾದ ಹಬ್ಬ ಹರಿದಿನಗಳ ಮಹತ್ವವನ್ನು ನಾವು ಕಲಿತು ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ ಎಂದರು.

ಮಹಿಳೆ ಮತ್ತು ಆರೋಗ್ಯ ಕುರಿತು ಮೈಸೂರಿನ ಡಾ.ಲಲಿತಾ ಭಾಸ್ಕರ್ ಮಾತನಾಡಿ, ಮಾನಸಿಕ, ಸಾಮಾಜಿಕ ಹಾಗೂ ಭೌಗೋಳಿಕವಾಗಿ ಸಮರ್ಥರಾಗಿರುವ ಹೆಣ್ಣನ್ನು ನಾವು ಆರೋಗ್ಯವಂತ ಮಹಿಳೆ ಎಂದು ಗುರುತಿಸಲಾಗುತ್ತದೆ. ಗರ್ಭಾವಸ್ಥೆ ಸಂದರ್ಭದಲ್ಲಿ ತನಗೆ ಏನು ಬೇಕು ಮತ್ತು ಯಾವುದು ಬೇಡ ಎನ್ನುವ ಕುರಿತು ನಿರ್ಧರಿತವಾದ ಆಕೆಯ ಮನ:ಸ್ಥಿತಿ. ಶಿಶುಪಾಲನೆಯನ್ನು ಸಮರ್ಥವಾಗಿ ನಿಭಾಯಿಸುವ ಆಕೆಯ ಸಂಯಮ, ಆರೋಗ್ಯ ಪರಿಪೂರ್ಣತೆ ಸಾಕ್ಷಾತ್ಕರಿಸುವಲ್ಲಿ ಯಶಸ್ಸು ಪಡೆದಿದೆ ಎಂದು ತಿಳಿಸಿದರು.

ಡಾ.ಲಕ್ಷ್ಮೀಪ್ರಸಾದ್, ಕೂತುಗೋಡು ಗ್ರಾಪಂ ಅಧ್ಯಕ್ಷೆ ಕೌಸ್ತುಭ ಮೋಹನ್, ತಾಲೂಕು ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸುಮಂಗಲಿ ಅನಂದಸ್ವಾಮಿ, ಪಪಂ ಮಾಜಿ ಉಪಾಧ್ಯಕ್ಷೆ ಮಧುರಾ ಗೋಪಾಲ್, ಆಹಾರ ಸಮಿತಿ ಸಂಚಾಲಕಿ ರಾಜಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net