ಮಕ್ಕಳಿಗೆ ಸಂಸ್ಕಾರ -ಸಂಸ್ಕೃತಿ ಕಲಿಸಿ

12 sandoor 01
ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ವಿಶ್ವ ತಾಯಂದಿರ ದಿನ ಆಚರಿಸಲಾಯಿತು. ವಿದ್ಯಾಕೇಂದ್ರದ ಗೌರವಾಧ್ಯಕ್ಷೆ ಲಕ್ಷ್ಮೀಬಾಯಿ ನಾನಾವಟೆ, ಕಾರ್ಯದರ್ಶಿ ಚಿದಂಬರ ನಾನಾವಟೆ, ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ, ಮುಖ್ಯಶಿಕ್ಷಕಿ ಸುಜಾತಾ ಘೋರ್ಪಡೆ, ರುಕ್ಮಿಣಿಬಾಯಿ ಕದಂ, ಮಾನಸ ಇತರರಿದ್ದರು.
Published on

ಸಂಡೂರು: ಭಾರತದ ಸಂಸ್ಕೃತಿಯಲ್ಲಿ ತಾಯಂದಿರ ದಿನಕ್ಕೆ ವಿಶೇಷ ಗೌರವವಿದೆ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ ನಾನಾವಟೆ ಹೇಳಿದರು.

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ತಾಯಂದಿರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಎಲ್ಲ ಮಾತೆಯರು ಮಕ್ಕಳಿಗೆ ಎಳೆತನದಿಂದಲೇ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸಬೇಕು ಎಂದರು.

ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ಮಾತನಾಡಿ, ಯಶೋಧೆಯು ಕೃಷ್ಣನನ್ನು, ಜೀಜಾಬಾಯಿ ಛತ್ರಪತಿ ಶಿವಾಜಿಯನ್ನು, ಕೌಸಲ್ಯೆ ರಾಮನನ್ನು ಬೆಳೆಸಿದಂತೆ ಎಲ್ಲ ತಾಯಂದಿರು ಮಕ್ಕಳನ್ನು ಉತ್ತಮ ಗುಣವಂತರನ್ನಾಗಿ ಬೆಳೆಸಬೇಕು ಎಂದರು. ತಾಯಂದರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net