

ಎಚ್.ಡಿ.ಕೋಟೆ: ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಿಕ್ಷಕಿ ಅಮಿತಾ ಸುಶೇನ್ ಮ್ಯಾಥ್ಯೂ ಹೇಳಿದರು.
ತಾಲೂಕಿನ ಹಂಪಾಪುರ ಗ್ರಾಮದ ಸೇಂಟ್ ಪಾಲ್ಸ್ ಹೈಸ್ಕೂಲ್ ಆವರಣದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳಿಗೆ ಮರಗಳ ಬಗ್ಗೆ ಗೊತ್ತಿಲ್ಲದ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೋಬಳಿ ಒಕ್ಕೂಟದ ಅಧ್ಯಕ್ಷ ಹರಿಪ್ರಸಾದ್ ಮಾತನಾಡಿದರು.
ಮಕ್ಕಳಿಗೆ ಯೋಜನೆಯಿಂದ ನೀಡಿದ ವಿವಿಧ ಜಾತಿಯ ದಾಳಿಂಬೆ, ಕರಿಬೇವು, ನೆಲ್ಲಿ, ನುಗ್ಗೆ, ಬೀಟೆ, ಬೇವು, ಹಿಪ್ಪುನೇರಳೆ, ಮಾವು, ಹಲಸು, ಗಿಡಗಳನ್ನು ಗಣ್ಯರು ವಿತರಣೆ ಮಾಡಿದರು.
ಸೇಂಟ್ ಪಾಲ್ಸ್ ಮಿಷನ್ ಹೈಸ್ಕೂಲ್ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ರಾಮಮೂರ್ತಿ, ಶಿಕ್ಷಕರಾದ ಮಹಾದೇವಸ್ವಾಮಿ, ತೇಜಸ್, ಯೋಜನೆ ವಲಯ ಮೇಲ್ವಿಚಾರಕಿ ವೀಣಾ, ಸೇವಾಪ್ರತಿನಿಧಿ ಭಾಗ್ಯಮ್ಮ, ಮಂಜು, ರಾಜೇಂದ್ರ ಇತರರು ಇದ್ದರು.