ವಿಷಯದ ಆಸಕ್ತಿ ಮೂಡಿಸಿ ಪಾಠ ಮಾಡಿ: ಗಜಾನನ ಬಾಳೆ ಸಲಹೆ

raichur
raichur
Published on

ರಾಯಚೂರು ಗಣಿತ , ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಶಿಕ್ಷಕರು ಮಕ್ಕಳ ಕಲಿಕೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಆಯಾ ವಿಷಯಗಳ ಬಗ್ಗೆ ಆಸಕ್ತಿ ಮೂಡುವ ಹಾಗೆ ಪಾಠ ಮಾಡಿದಲ್ಲಿ ವಿಷಯವು ಮಕ್ಕಳಿಗೆ ಮನದಟ್ಟಾಗುವುದು ಎಂದು ಸಹಾಯಕ ಆಯುಕ್ತ ಗಜಾನನ ಬಾಳೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಯಚೂರು ಉಪ ವಿಭಾಗದ ಕೆಆರ್‌ಇಐಎಸ್ ಶಾಲೆಗಳ ಗಣಿತ , ವಿಜ್ಞಾನ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಭಾಷಾ ವಿಷಯಗಳ ಶಿಕ್ಷಕರು ಮಕ್ಕಳ ಭಾಷಾ ಸಾರ್ಮಥ್ಯವನ್ನು ಅರಿತು ಪಾಠ ಮಾಡುವ ರೀತಿಯಲ್ಲಿ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳ ಶಿಕ್ಷಕರು ಮ್ಯಾಪ್, ಡೈಗ್ರಾಮ ಸೇರಿದಂತೆ ಪಾಠೋಪಕರಣಗಳ ಬಳಕೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ಮಾಡಿದರು.

ತಹಸೀಲ್ದಾರ ಸುರೇಶ ವರ್ಮಾ ಅವರು ಮಾತನಾಡಿ, ನಮ್ಮ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾರ್ಮಥ್ಯ ಇರುತ್ತದೆ. ಅದನ್ನು ಶಿಕ್ಷಕರು ಗುರುತಿಸಬೇಕು. ಸರಿಯಾಗಿ ಓದಿದಾಗ ಭಾಷಾ ವಿಷಯಕ್ಕಿಂತ ಗಣಿತ, ವಿಜ್ಞಾನದಂತಹ ವಿಷಯಗಳಲ್ಲಿಯೆ ಅತಿ ಹೆಚ್ಚು ಅಂಕಗಳನ್ನು ಪಡೆಯಬಹುದಾಗಿದೆ. ಶಿಕ್ಷಕರಿಗು ಇದು ತಿಳಿದಿದ್ದು, ಸರಳವಾದ ಕಲಿಕಾ ವಿಧಾನ ಪಾಲನೆ ಮಾಡಬೇಕು ಎಂದು ಸಲಹೆ ಮಾಡಿದರು.

ಡಿವೈಎಸ್ಪಿ ಶಾಂತವೀರ ಇದೆ ವೇಳೆ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net