ಸೆ.8-9 ಟಿಡಿಎಫ್ ಆಭರಣ ಪ್ರದರ್ಶನ ಹೊಸತನದ ವಿನ್ಯಾಸದಿಂದ ಗ್ರಾಹಕರ ಬೆರಗು

mng--7 sep TDF 2
Published on

ಮಂಗಳೂರು: ಹೆಸರಾಂತ ಆಭರಣ ಬ್ರಾೃಂಡ್ ಆಗಿರುವ ಟಿಡಿಎಫ್ ದಿ ಡೈಮಂಡ್ ಫ್ಯಾಕ್ಟರಿಯು ನಗರದ ನಂದಿಗುಡ್ಡ ರಸ್ತೆಯಲ್ಲಿರುವ ಅವತಾರ್ ಹೋಟೆಲ್ ಆ್ಯಂಡ್ ಕನ್ವೆನ್‌ಷನ್‌ನಲ್ಲಿ ಸೆ.8 ಮತ್ತು 9ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7.30ರ ತನಕ ವಜ್ರಾಭರಣ ಮತ್ತು ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದೆ.


ಖ್ಯಾತ ಹೆರಿಗೆ ತಜ್ಞೆ ಹಾಗೂ ವಿಜಯಾ ಕ್ಲಿನಿಕ್‌ನ ಸಂಸ್ಥಾಪಕಿ ಡಾ.ಪ್ರಿಯಾ ಬಳ್ಳಾಲ್, ಕನ್ಸಲ್ಟೆಂಟ್ ಡೆಂಟಲ್ ಸರ್ಜನ್ ಹಾಗೂ ದಿ ಡೆಂಟಲ್ ಸ್ಪೆಷಲಿಸ್ಟ್ ಕ್ಲಿನಿಕ್‌ನ ಸಹ ಪಾಲುದಾರೆ ಡಾ.ಸುಮಿತಾ ನಾಯ್ಕ ಅವರು ಪ್ರದರ್ಶನ ಮತ್ತು ಮಾರಾಟದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸುವರು.
ಟಿಡಿಎಫ್ ಅಂಧೇರಿ, ಬಾಂದ್ರಾ, ವಾಶಿ ಮತ್ತು ಮಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿದೆ. ಟಿಡಿಎಫ್ ಬ್ರಾಂಡ್ ಆಭರಣ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಮಂಗಳೂರು ಮಳಿಗೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುಂಚೂಣಿಯಲ್ಲಿದೆ. ಇದರಿಂದಾಗಿ ಟಿಡಿಎಫ್ ಕರಾವಳಿ ಜನತೆಯ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದೆ. ವೈವಿಧ್ಯಮಯ ವಿನ್ಯಾಸ, ನಗು ಮೊಗದ ಸೇವೆ, ತಕ್ಷಣದ ಸ್ಪಂದನೆಗೆ ಗ್ರಾಹಕರು ಮಾರು ಹೋಗಿದ್ದಾರೆ.


ಶೇ.100 ರಿಯಾಯಿತಿ: ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಈ ಆಭರಣ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಆಯ್ದ ಚಿನ್ನ ಮತ್ತು ವಜ್ರದ ಆಭರಣಗಳಿಗೆ ಮೇಕಿಂಗ್ ಶುಲ್ಕದ ಮೇಲೆ ಶೇ.100 ರಿಯಾಯಿತಿ ನೀಡಲಾಗುತ್ತಿದ್ದು, ಈ ಸೀಮಿತ ಅವಧಿಯ ಕೊಡುಗೆಯು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಭರಣಗಳನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶವಾಗಿದೆ. ಟಿಡಿಎ್ ತನ್ನ ಇತ್ತೀಚಿನ ಸಂಗ್ರಹಣೆಗಳನ್ನು ಕೂಡ ಇಲ್ಲಿ ಪ್ರದರ್ಶಿಸುತ್ತದೆ. ಈ ಋತುವಿನ ಲೇಟೆಸ್ಟ್ ಟ್ರೆಂಡ್‌ಗಳು ಮತ್ತು ವಿನ್ಯಾಸಗಳನ್ನು ಒಳಗೊಂಡಿದೆ. ಗ್ರಾಹಕರು ಕ್ಲಾಸಿಕ್‌ನಿಂದ ಸಮಕಾಲೀನವರೆಗೆ ವೈವಿಧ್ಯಮಯ ಶೈಲಿಗಳನ್ನು ಈ ಪ್ರದರ್ಶನದಲ್ಲಿ ನೋಡಬಹುದಾಗಿದೆ.


ಮಂಗಳೂರಿನಲ್ಲಿ ಚಿನ್ನ ಮತ್ತು ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲು ಬಹಳಷ್ಟು ಉತ್ಸುಕರಾಗಿದ್ದೇವೆ. ಮಹಿಳಾ ವೈದ್ಯರು ವಿಶೇಷ ಅತಿಥಿಯಾಗಿ ಭಾಗವಹಿಸುವ ಮೂಲಕ ವೈವಿಧ್ಯತೆ ಮತ್ತು ಶ್ರೀಮಂತಿಕೆ ಹೆಚ್ಚಳವಾಗಲಿದೆ. ಗ್ರಾಹಕರು ಖರೀದಿ ಮಾತ್ರವಲ್ಲದೆ ಹೊಸ ಅನುಭವ ಹೊಂದುವ ಸದವಕಾಶ ಸಿಗಲಿದೆ. ವಿರಾಜ್ ಹೆಗ್ಡೆ ಮತ್ತು ಸುಧಾ ಶೆಟ್ಟಿ ಅವರು ಮಂಗಳೂರು ಸ್ಟೋರ್‌ನ ಸಹಾಯಕ ಪಾಲುದಾರರಾಗಿದ್ದಾರೆ. ಈ ಮೂಲಕ ನಮ್ಮ ಉದ್ಯಮ ಪಯಣದ ಯಶಸ್ಸಿಗೆ ಕಾರಣರಾಗಿದ್ದಾರೆ. ಅವರ ಸಮರ್ಪಣೆ ಮತ್ತು ಶ್ರೇಷ್ಠತೆ ಮಳಿಗೆ ಯಶಸ್ಸಿನಲ್ಲಿ ಎದ್ದು ಕಾಣುತ್ತಿದೆ ಎಂದು ಟಿಡಿಎಫ್-ದಿ ಡೈಮಂಡ್ ಪ್ಯಾಕ್ಟರಿಯ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಪ್ರಸನ್ನ ಶೆಟ್ಟಿ ತಿಳಿಸಿದ್ದಾರೆ.


ಮಂಗಳೂರು ನಮ್ಮ ಉದ್ಯಮ ಪಯಣದ ವಿಶೇಷ ಸ್ಥಳವಾಗಿದೆ. ಕಲಾತ್ಮಕ ಹಾಗೂ ಅಮೋಘ ಪ್ರದರ್ಶನಕ್ಕೆ ಮಂಗಳೂರಿನ ಜನತೆ ಕಾಯುತ್ತಿದ್ದಾರೆ. ಟಿಡಿಎಫ್ ಡೈಮಂಡ್ ಫ್ಯಾಕ್ಟರಿಯ ಚಿನ್ನ ಹಾಗೂ ವಜ್ರಾಭರಣ ವಿಶೇಷ ವಿನ್ಯಾಸ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಇನ್ನೋರ್ವ ನಿರ್ದೇಶಕ ಹಾಗೂ ಸಹ ಸಂಸ್ಥಾಪಕ ಗೌತಮ್ ಜಿ.ಸಿಂಘ್ವಿ ಹೇಳಿದ್ದಾರೆ.


ಮಂಗಳೂರು ಮಳಿಗೆಯ ಸಹಪಾಲುದಾರರಾಧ ವಿರಾಜ್ ಹೆಗ್ಡೆ ಮತ್ತು ಸುಧಾ ಶೆಟ್ಟಿ ಅವರು ಗ್ರಾಹಕರ ನಾಡಿ ಮಿಡಿತವನ್ನು ಮನಗಂಡು ಅವರಿಗೆ ಬೇಕಾದಂತೆ ಯಾವುದೇ ಋಣಾತ್ಮಕ ಭಾವನೆ ಬರದಂತೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಅವರಿಗೆ ಪೂರಕ ಸ್ಪಂದನೆ ನೀಡುತ್ತಿದ್ದಾರೆ. ಇದರಿಂದಾಗಿ ಮಂಗಳೂರು ಮಳಿಗೆ ಯಶಸ್ಸು ಪಡೆದಿದೆ. ಮಂಗಳೂರು ಜನತೆಗೆ ಪ್ರದರ್ಶನಕ್ಕೆ ಆಗಮಿಸಿ ತಮ್ಮ ಆಪ್ತತೆಯ ವಿನ್ಯಾಸವನ್ನು ಆಯ್ಕೆ ಮಾಡಲು ಇದೊಂದು ಸುವರ್ಣವಕಾಶವಾಗಿದೆ. ಟಿಡಿಎಫ್ ಡೈಮಂಡ್ ಫ್ಯಾಕ್ಟರಿ ಚಿನ್ನ ಹಾಗೂ ವಜ್ರಾಭರಣ ಪ್ರದರ್ಶನಕ್ಕೆ ಎಲ್ಲರನ್ನು ಆಹ್ವಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net