

ಬಾಗಲಕೋಟೆ:ಬಿವಿವಿ ಸಂದ ಎಸ್.ನಿಜಲಿಂಗಪ್ಪ ವೈದ್ಯಕಿಯ ಮಹಾವಿದ್ಯಾಲಯದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಮನೋವೈದ್ಯಕಿಯ ವಿಭಾಗಕ್ಕೆ ಭಾರತೀಯ ಮನೋವೈದ್ಯಕಿಯ ಸಂದ ಕರ್ನಾಟಕ ಶಾಖೆಯವರು ಸುಮಾರು ಒಂದೂವರೆ ಲ ರೂಪಾಯಿ ವೆಚ್ಚದ ಟ್ರಾನ್ಸಕ್ರಾನಿಯಲ್ ಡೈರೆಕ್ಟ ಕರೆಂಟ್ ಸ್ಟಿಮುಲೇಶನ್ (ಟಿಡಿಸಿಎಸ್) ಉಪಕರಣವನ್ನು ಸಿಎಸ್ಆರ್ ಯೋಜನೆ ಅಡಿಯಲ್ಲಿ ದೇಣಿಗೆಯಾಗಿ ನೀಡಿದರು.
ಭಾರತೀಯ ಮನೋವೈದ್ಯಕಿಯ ಸಂದ ಕರ್ನಾಟಕ ಶಾಖೆಯ ಅಧ್ಯ ಡಾ.ಸೋಮಶೇಖರ ಬಿಜ್ಜಳ ಅವರು ಬಿವಿವಿ ಸಂದ ಕಾರ್ಯಾಧ್ಯ ವೀರಣ್ಣ ಚರಂತಿಮಠ ಅವರಿಗೆ ಉಪಕರಣವನ್ನು ಹಸ್ತಾಂತರಿಸಿದರು.ಈ ವೇಳೆ ಮಾತನಾಡಿದ ವೀರಣ್ಣ ಚರಂತಿಮಠ, ಮಾನಸಿಕ ಕಾಯಿಲೆ ಸಾಮಾನ್ಯವಾಗಿ ಎಲ್ಲ ವಯೋಮಾನದವರಲ್ಲಿ ಕಂಡುಬರುತ್ತಿರುವ ಕಾಯಿಲೆಯಾಗಿದೆ. ಈ ದಿಸೆಯಲ್ಲಿ ದೇಹದ ಆರೋಗ್ಯದಷ್ಟೇ ಮಾನಸಿಕ ಆರೋಗ್ಯ ಕೂಡ ಮುಖ್ಯವಾಗಿದೆ.
ಮನೋವೈದ್ಯರು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಸ್ವಾಸ್ಥ$್ಯ ಸಮಾಜದ ನಿರ್ಮಾಣದಲ್ಲಿ ಬಹುಮುಖ್ಯ ಕೊಡುಗೆ ನೀಡುತ್ತಿದ್ದಾರೆ. ಮನೋವೈದ್ಯರ ಸಂ ಖಿನ್ನತೆಯ ಚಿಕಿತ್ಸೆಗೆ ಅತ್ಯಂತ ಆಧುನಿಕ ಉಪಕರಣವನ್ನು ಕುಮಾರೇಶ್ವರ ಆಸ್ಪತ್ರೆಗೆ ನೀಡಿರುವುದು ಶ್ಲಾನೀಯ ಎಂದರು.
ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ನಾರಾಯಣ ಮುತಾಲಿಕ, ಅರವಳಿಕೆಯ ಅಗತ್ಯವಿಲ್ಲದೆ, ಈ ಉಪಕರಣದ ಸಹಾಯದಿಂದ ಖಿನ್ನತೆ ಹಾಗೂ ಸ್ಕಿಜೋ್ರೇನಿಯಾ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ ಎಂದು ವಿವರಿಸಿದರು.
ಬಿವಿವಿ ಸಂದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕಿಯ ಆಡಳಿತ ಮಂಡಳಿ ಕಾರ್ಯಧ್ಯ ಅಶೋಕ ಸಜ್ಜನ, ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ಡಾ.ಶ್ರೀರಾಮ ಕೋರಾ ಉಪಸ್ಥಿತರಿದ್ದರು.
ಬಾಗಲಕೋಟೆ ಬಿವಿವಿ ಸಂದ ಕುಮಾರೇಶ್ವರ ಆಸ್ಪತ್ರೆಗೆ ಭಾರತೀಯ ಮನೋವೈದ್ಯಕಿಯ ಸಂದ ಕರ್ನಾಟಕ ಶಾಖೆ ವತಿಯಿಂದ ಟಿಡಿಸಿಎಸ್ ಉಪಕರಣವನ್ನು ಡಾ.ಸೋಮಶೇಖರ ಬಿಜ್ಜಳ ಅವರು ಬಿವಿವಿ ಸಂದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರಿಸಿದರು. ಸಂದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮೆಡಿಕಲ್ ಕಾಲೇಜ್ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ನಾರಾಯಣ ಮುತಾಲಿಕ ಮತ್ತಿತರರು ಇದ್ದರು.