ದೀಪಾವಳಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ಸು

IMG-20241122-WA0007.jpg
Published on

-ಇತ್ತಿಚೆಗೆ ಹಮಾರಾ ದೇಶ ಸಂಘಟನೆಯ ಜರುಗಿತು.*

ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಮಾರಾ ದೇಶ ಸಂಘಟನೆಯ ದೀಪಾವಳಿ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಈಚೆಗೆ ಅದ್ದೂರಿಯಾಗಿ ಜರುಗಿತು.

ಇದೇ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಸುಹಾಸ ಪಾಟೀಲ, ಉದ್ಯಮಿ‌ ರಾಜೇಶ ಅವಟೆ ಅವರು ಮಾತನಾಡಿ, ರಾಜೇಶ ಅವಟೆಯವರು ಸಂಘಟನೆಯ ಕಾರ್ಯಕರ್ತರಿಗೆ ಸಂಘಟನೆಯ ಮಹತ್ವ ಹಾಗೂ ಸನಾತನ ಸಂಸ್ಕ್ರತಿಯ ಮೇಲಾಗುತ್ತಿರುವ ದಾಳಿಗಳ ಬಗ್ಗೆ ವಿವರಿಸುತ್ತಾ ಹೇಗೆ ನಾವೆಲ್ಲ ಸಂಘಟಿತರಾಗಿರಬೇಕು ಎಂದು ಮನವರಿಕೆ ಮಾಡಿಕೊಟ್ಟರು.

ಹಿಂದೂ ಜನ ಜಾಗ್ರತಿ ಕಾರ್ಯಕರ್ತರಾದ ಶ್ರೀ ಸುಧೀರ ಹೆರೇಕರ ಹಾಗೂ ವಿಶ್ವ ಹಿಂದೂ ಪರಿಷತ್ತಿನ ನಗರ ಕಾರ್ಯದರ್ಶಿ ನಾಗೇಶ ಕಾಂಬಳೆ ಇವರನ್ನು ಸಂಘಟನೆಯ ವತಿಯಿಂದ ಸಸಿ ಕೊಟ್ಟು , ಶಾಲು ಹೊದಿಸಿ ಸಮ್ಮಾನಿಸಲಾಯಿತು.

ಸಂಘಟನೆಯ ಕಾರ್ಯಕರ್ತರಾದ ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಘಟನೆಯ ಧ್ಯೇಯೋದ್ದೇಶಯಗಳನ್ನು ವಿವರಿಸಿದರು. ಪೂಜಾ ಕುಲಕರ್ಣಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಸಂಘಟನೆಯ ಕಾರ್ಯಕರ್ತರ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

ಹೊಟೆಲ್ ಉದ್ಯಮಿಗಳಾದ ಅಜಯ ಪೈ ಭೋಜನದ ಆತಿಥ್ಯವನ್ನು ವಹಿಸಿಕೊಂಡಿದ್ದರು.

ಒಟ್ಟು ಕಾರ್ಯಕ್ರಮದ ಯಶಸ್ವಿಗಾಗಿ ಸಂಘಟನೆಯ ಕಾರ್ಯಕರ್ತರಾದ ಚಿತ್ರಾ ಕಾಮಕರ, ಆಶಾ ಬಳ್ಳೊಳ್ಳಿ, ಶೀತಲ ಮುಳಗುಂದ, ಪ್ರಾಚಿ ಸುತಾರ, ಜಯಲಕ್ಷ್ಮೀ, ಕಪಿಲಾ ಮಜುಕರ, ನೀನಾ ಕಾಕತಕರ, ಅಜಿತ, ಪ್ರಕಾಶ, ಪ್ರಶಾಂತ, ಲಕ್ಷ್ಮೀಕಾಂತ ಇನ್ನಿತರರು ಕೈ ಜೋಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net