ಮತ್ತೆ ನಾಲ್ಕು ಕಂಪನಿಗಳಿAದ ಅರ್ಜಿ

29 MANJU 07
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ 32 ಕ್ರಸ್ಟ್ ಗೇಟ್ಗಳ ಬದಲಾವಣೆ ಕರೆಯಲಾಗಿದ್ದ ಟೆಂಡರ್ಗೆ ಮತ್ತೆ ನಾಲ್ಕು ಕಂಪನಿಗಳು ಅರ್ಜಿ ಸಲ್ಲಿಸಿವೆ.

ಈ ಹಿಂದೆ ಕರೆಯಲಾಗಿದ್ದ ಟೆಂಡರ್ಗೆ ಅರ್ಜಿ ಸಲ್ಲಿಸಿದ್ದ ನಾಲ್ಕು ಗುತ್ತಿಗೆ ಕಂಪನಿಗಳು ಅರ್ಹತೆ ಹೊಂದದ ಹಿನ್ನೆಲೆ ಈಗ ತುಂಗಭದ್ರಾ ಮಂಡಳಿ ಮರು ಟೆಂಡರ್ ಕರೆದಿತ್ತು. ಕಾಮಗಾರಿ ಮರು ಟೆಂಡರ್ಗೆ ಗುಜರಾತ ಹಾಗೂ ತೆಲಂಗಾಣ ರಾಜ್ಯಗಳ ಕಂಪನಿಗಳು ಅರ್ಜಿ ಸಲ್ಲಿಸಿವೆ ಎಂದು ಟಿಬಿಬಿ ಅಧಿಕಾರಿಗಳು ತಿಳಿಸಿದರು.

ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆಗೆ ಪರಿಣತ ತಜ್ಞರು ಸಲಹೆ ನೀಡಿದ್ದಾರೆ. ಇನ್ನೂ ಎನ್ಡಿಟಿ ಸರ್ವಿಸ್ ಸಂಸ್ಥೆ ಕೂಡ ಅಧ್ಯಯನ ನಡೆಸಿ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ 32 ಗೇಟ್ ಗಳ ಬದಲಾವಣೆಗೆ ಇ-ಟೆಂಡರ್ ಕರೆಯಲಾಗಿತ್ತು. ಹಾಗಾಗಿ 32 ಗೇಟ್ಗಳ ಬದಲಾವಣೆಗೆ ತುಂಗಭದ್ರಾ ಮಂಡಳಿ ಅರ್ಜಿ ಆಹ್ವಾನಿಸಿತ್ತು. ಆಗಲೂ ನಾಲ್ಕು ಕಂಪನಿಗಳು ಮಾತ್ರ ಅರ್ಜಿ ಸಲ್ಲಿಸಿದ್ದವು. ತಾಂತ್ರಿಕ ಕಾರಣದಿಂದ ಮತ್ತೆ ಮರು ಟೆಂಡರ್ ಕರೆದು ಅರ್ಜಿ ಆಹ್ವಾನಿಸಲಾಗಿತ್ತು. ಈಗ ಮತ್ತೆ ನಾಲ್ಕು ಕಂಪನಿಗಳು ಮಾತ್ರ ಅಜಿ ಸಲ್ಲಿಕೆ ಮಾಡಿವೆ.

ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ಗಳ ಮರು ನಿರ್ಮಾಣಕ್ಕಾಗಿ ಗುಜರಾತ ಮೂಲದ ಅನಾರ್ ಕಂಪನಿ ಮತ್ತು ಹಾಡ್ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗಳು ಅರ್ಜಿ ಸಲ್ಲಿಸಿವೆ. ಇನ್ನೊಂದೆಡೆ ತೆಲಂಗಾಣ ರಾಜ್ಯದ ಸ್ವಪ್ನಾ ಮತ್ತು ಬೆಕಂ ಕಂಪನಿಗಳು ಅರ್ಜಿ ಸಲ್ಲಿಸಿವೆ. ಈಗ ತಾಂತ್ರಿಕ ಬಿಡ್ ಓಪನ್ ಆಗಿದ್ದು, ಯಾರಿಗೆ ಟೆಂಡರ್ ಆಗಿದೆ ಎಂಬುದು ಇನ್ನೂ ರ್ನಾಲ್ಕು ದಿನಗಳಲ್ಲಿ ತಿಳಿಯಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ಗಳ ನಿರ್ಮಾಣದಲ್ಲಿ ಸ್ಥಳೀಯ ಕಂಪನಿಗಳಿಗೆ ಆದ್ಯತೆ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಳಿ ಶಾಸಕರು ಒತ್ತಾಯ ಮಾಡಿದ್ದರು. ಆದರೆ, ತುಂಗಭದ್ರಾ ಮಂಡಳಿ ಮರು ಟೆಂಡರ್ ಕರೆದರೂ ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಒಂದೇ ಒಂದು ಕಂಪನಿಯೂ ಅರ್ಜಿ ಸಲ್ಲಿಸಿಲ್ಲ. ಜಲಾಶಯದ ಕ್ರಸ್ಟ್ ಗೇಟ್ಗಳ ನಿರ್ಮಾಣದಲ್ಲಿ ಅನುಭವ ಹಾಗೂ ಆಧ್ಯತೆ ಹೊಂದಿರುವ ಯಾವ ಕಂಪನಿಗಳು ಕರ್ನಾಟಕದಲ್ಲಿಲ್ಲವೇ ಎಂಬ ಪ್ರಶ್ನೆ ಈಗ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net