ಪವರ ಹೌಸ್ ಮೂಲಕ ನದಿಗೆ ನೀರು

news
ತುಂಗಭದ್ರಾ ಜಲಾಶಯದ ಪವರ್ ಹೌಸ್ನ ಆರ್.ಒ.ಎಫ್.ಎಸ್. ಗೇಟ್ ಮೂಲಕ ನದಿಗೆ ನೀರು ಹರಿಸಲಾಯಿತು.
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ ಪವರ ಹೌಸ್ ಮೂಲಕ ನದಿಗೆ 6 ಸಾವಿರ ಕ್ಯೂಸೆಕ್ ನೀರು ಭಾನುವಾರ ಹರಿಸಲಾಗಿದೆ.

ತುಂಗಭದ್ರಾ ಜಲಾಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಳೆದ ನಾಲ್ಕು ದಿನಗಳಿಂದ ಹೆಚ್ಚುದೆ. ಭಾನುವಾರ 1.20 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಪವರ ಹೌಸ್ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ ತುಂಗಭದ್ರಾ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

ತುಂಗಭದ್ರಾ ಜಲಾಶಯದಿಂದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು  ಭಾನುವಾರ ಬೆಳಗ್ಗೆ 9 ಗಂಟೆಯಿಂದ ಪವರ್ ಹೌಸ್ನ ಆರ್.ಒ.ಎಫ್.ಎಸ್. ಗೇಟ್ ಮೂಲಕ ಗಂಟೆಗೆ 500 ಕ್ಯೂಸೆಕ್‌ ನಂತೆ 4 ಸಾವಿರದಿಂದ  6 ಸಾವಿರ ಕ್ಯೂಸೆಕ್‌ ವರೆಗೆ ನೀರು ನದಿಗೆ ಹರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

10 ದಿನದಲ್ಲಿ 67.8 ಟಿಎಂಸಿ ನೀರು: 1,633 ಅಡಿ ಎತ್ತರದ ತುಂಗಭದ್ರಾ ಜಲಾಶಯದಲ್ಲಿ ಬೆಳಗ್ಗೆ 8ರ ವರದಿಯಂತೆ ಸದ್ಯ ನೀರಿನ ಮಟ್ಟ 1,624.41 ಅಡಿ ತಲುಪಿದೆ. ಆಣೆಕಟ್ಟೆ ಭರ್ತಿಯಾಗಲು ಇನ್ನು 8.59 ಅಡಿಯಷ್ಟೇ ಬಾಕಿ ಉಳಿದಿದೆ. ಜುಲೈ 1ರಂದು ಅಣೆಕಟ್ಟೆಯ ನೀರಿನ ಮಟ್ಟ 1,,584.15 ಅಡಿಯಷ್ಟಿತ್ತು. ಕೇವಲ 10 ದಿನಗಳಲ್ಲಿ ನೀರಿನ ಮಟ್ಟ 37 ಅಡಿಗಳಷ್ಟು ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ. ಜುಲೈ 1ರಂದು ಜಲಾಶಯದಲ್ಲಿ 6.78 ಟಿಎಂಸಿ ಅಡಿಯಷ್ಟು ಮಾತ್ರ ನೀರಿತ್ತು. 21 ದಿನದಲ್ಲಿ ನೀರಿನ ಪ್ರಮಾಣ 10 ಪಟ್ಟು ಹೆಚ್ಚಾಗಿದ್ದು, 67.8 ಟಿಎಂಸಿ ನೀರು ಹರಿದು ಬಂದಿದೆ. ಒಟ್ಟು 74.851 ನೀರು ಸಂಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net