

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಅಳವಡಿಸಿರುವ ಕಾರ್ಯದ ಕಾಮಗಾರಿ ರೂಪುರೇಷೆ ಕುರಿತ ಗುಜರಾತ್‌ನ ಹಾರ್ಡ್ ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಯಿAದ ಕಾಮಗಾರಿ ರೂಪುರೇಷೆ ವರದಿ ಟಿಬಿಬಿಗೆ ಸಲ್ಲಿಕೆಯಾಗಿದೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್‌ಗಳ ವಿನ್ಯಾಸ ಈಗಾಗಲೇ ರಾಷ್ಟಿçÃಯ ಜಲಾಶಯ ಸುರಕ್ಷತಾ ಪ್ರಾಧಿಕಾರ ಅನುಮೋದನೆ ನೀಡಿದೆ. ಟೆಂಡರ್ ಪ್ರಕ್ರೀಯೆ ಮುಗಿದಿದ್ದು, 19ನೇ ಗೇಟ್ ಸ್ಥಳದಲ್ಲಿ ತಾತ್ಕಾಲಿಕವಾಗಿ ಅಳವಡಿಸಿರುವ ಸ್ಟಾಪ್ ಲಾಗ್ ತೆಗೆದು ಕ್ರಸ್ಟ್ ಗೇಟ್ ನಿರ್ಮಾಣ ಮಾಡಲು ಗುಜರಾತಿನ ಕಂಪನಿ ಜವಾಬ್ದಾರಿ ವಹಿಸಿಕೊಂಡಿದೆ. ಕ್ರಸ್ಟ್ ಗೇಟ್ ನಿರ್ಮಾಣ ಹಾಗೂ ಅಳವಡಿಕೆ ಕಾರ್ಯ ಯಾವರೀತಿ ಹಾಗೂ ಹೇಗೆ ಅಳವಡಿಕೆ ಮಾಡುವುದು ಎಂದು ಗುತ್ತಿಗೆ ಕಂಪನಿ ಅಳವಡಿಕೆ ವಿನ್ಯಾಸದ ಮೂಲಕ ಟಿಬಿಬಿಗೆ ವರದಿ ನೀಡಿದೆ. ರಾಷ್ಟಿçÃಯ ಜಲಾಶಯ ಸುರಕ್ಷತಾ ಪ್ರಾಧಿಕಾರದಿಂದ ಅನುಮೋದನೆ ಸಿಗಬೇಕಿದೆ. ಇನ್ನೂ ಟಿಬಿಬಿ ಮಂಡಳಿಯಿAದ ಹಸಿರು ನಿಶಾನೆ ದೊರೆತ ಬಳಿಕ ಗೇಟ್ ನಿರ್ಮಾಣಕಾರ್ಯ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆ.10ರಂದು ಕಳಚಿತು. ಬಳಿಕ 40 ಟಿಎಂಸಿಯಷ್ಟು ನೀರು ನದಿ ಪಾಲಾಗಿ ಮೂರು ರಾಜ್ಯಗಳ ರೈತರಲ್ಲಿ ಆತಂಕ ಮೂಡಿತು. ಪರಿಣತ ತಜ್ಞ ಕನ್ನಯ್ಯ ನಾಯ್ಡು ಈ ಗೇಟ್ ಜಾಗಕ್ಕೆ ಸ್ಟಾಪ್ ಲಾಗ್ ಅಳವಡಿಕೆ ಮಾಡಿದ್ದರು.
ಜಲಾಶಯದ 32 ಕ್ರಸ್ಟ್ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳ ನಿರ್ಮಾಣಕ್ಕಾಗಿ ತುಂಗಭದ್ರಾ ಮಂಡಳಿ ಇ- ಟೆಂಡರ್ ಕರೆದಿದ್ದು, ಈ ಟೆಂಡರ್ ಮೇ.5ಕ್ಕೆ ಒಪನ್ ಆಗಲಿದೆ. ಇ-ಟೆಂಡರ್‌ನಲ್ಲಿ ಯಾವ ಕಂಪನಿಗೆ ಟೆಂಡರ್ ಆಗಿದೆ ಎಂಬುದು ತಿಳಿಯಲಿದೆ. ಈಗಾಗಲೇ 19ನೇ ಗೇಟ್‌ನ ಸ್ಟಾಪ್‌ಲಾಗ್ ತೆರವುಗೊಳಿಸಿ ಕ್ರಸ್ಟ್ ಗೇಟ್ ನಿರ್ಮಾಣ ಕಾರ್ಯಕ್ಕಾಗಿ ಗುಜರಾತ್ ಮೂಲದ ಕಂಪನಿಗೆ ನೀಡಲಾಗಿದೆ.