

ಹೊಸಪೇಟೆ: ತುಂಗಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ನಿಂದ 10 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬುಧವಾರ ಹರಿಬಿಡಲಾಯಿತು.
ತುಂಗಭದ್ರಾ ಜಲಾಶಯದಲ್ಲಿ ಬೆಳಗ್ಗೆ 8 ಗಂಟೆ ವರಿದಿ ಪ್ರಕಾರ 1625.20 ಅಡಿಗೆ 77.144 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 8 ಅಡಿ ಅಷ್ಟೇ ಬಾಕಿಯಿದೆ. 30 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಇನಷ್ಟು ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಬೆಳಗ್ಗೆ 10 ಗಂಟೆಗೆ 2 ಕ್ರಸ್ಟ್ಗೇಟ್ 2 ಅಡಿ ಎತ್ತರಿಸಿ ಮೂಲಕ ನೀರನ್ನು ನದಿಗೆ ಹರಿಸಿ 6 ಸಾವಿರ ಕ್ಯೂಸೆಕ್ ನೀರು ಹರಿಸಲಾಯಿತು.
ಮಧ್ಯಾಹ್ನ ಇನ್ನೇರಡು ಗೇಟ್‌ಗಳ ಮೂಲಕ ಒಟ್ಟು ನಾಲ್ಕು ಗೇಟ್‌ಗಳನ್ನು ಎರಡು ಅಡಿ ಎತ್ತರಿಸಿ 9400 ಕ್ಯೂಸೆಕ್ ನೀರು ಹರಿಸಲಾಗಿದೆ. ಕಾಲೂವೆ ಮೂಲಕ ನದಿಗೆ ಒಂದು ಸಾವಿರ ಕ್ಯೂಸೆಕ್ ನೀರು ಒಟ್ಟು ಒಂದು ಸಾವಿರ ಕ್ಯೂಸೆಕ್ ವರೆಗೆ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ಸಂಜೆ ನಂತರ ಇನ್ನೂ ಎರಡು ಗೇಟ್‌ಗಳನ್ನು ಎತ್ತರಿಸಿ 25 ಸಾವಿರ ಕ್ಯೂಸೆಕ್ ವರೆಗೆ ನೀರು ನದಿಗೆ ಬಿಡುವ ಸಾಧ್ಯತೆಗಳಿವೆ. ನದಿ ಪಾತ್ರದ ಜನರು-ಜಾನುವಾರಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯ ಮಂಡಳಿ ಎಚ್ಚರಿಕೆ ಕೂಡ ಈಗಾಗಲೇ ನೀಡಿದೆ.