ಟಿಬಿ ಡ್ಯಾಂನಿAದ 58 ಸಾವಿರ ಕ್ಯೂಸೆಕ್ ನೀರು ನದಿಗೆ

03 MANJU 06
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ 20 ಕ್ರಸ್ಟ್ ಗೇಟ್ ಗಳಿಂದ 58260 ಕ್ಯೂಸೆಕ್ ನೀರು ನದಿಗೆ ಗುರುವಾರ ಹರಿಸಲಾಯಿತು.

ಬೆಳಗ್ಗೆ 11ಕ್ಕೆ ಜಲಾಶಯದ 12 ಕ್ರಸ್ಟ್ ಗೇಟ್ ಗಳಿಂದ 35100 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಇನ್ನು ಸಂಜೆ ಮೂರು ಗಂಟೆಗೆ ಒಟ್ಟು 20 ಗೇಟ್ ಗಳಿಂದ 58 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಜಲಾಶಯಯದಲ್ಲಿ ಬೆಳಗ್ಗೆ 11ಕ್ಕೆ 34625 ಕ್ಯೂಸೆಕ್ ಒಳಹರಿವು ಇತ್ತು. ಮೂರಕ್ಕೆ 28.932 ಕ್ಯೂಸೆಕ್ ಒಳಹರಿವಿದೆ. 1633 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 1625.46 ಅಡಿ ನೀರು ಭರ್ತಿಯಾಗಿದೆ. 78.01 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ 20 ಕ್ರಸ್ಟ್ ಗೇಟ್ ಗಳನ್ನು 2.5 ಅಡಿ ಎತ್ತರಿಸಿ, ತಲ ಒಂದು ಗೇಟ್ ನಿಂದ 2913 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಬುಧವಾರ ಆರು ಕ್ರಸ್ಟ್ ಗೇಟ್ ಗಳ ಮೂಲಕ 15100 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿತ್ತು.

ತುಂಗ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬರುತ್ತದೆ. ಇನ್ನೂ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿದ್ದು, ವರದ ನದಿಯಿಂದಲೂ ಅಷ್ಟೇ ಪ್ರಮಾಣದ ನೀರು ಹರಿ ಬರಿದು ಬರುತ್ತಿದೆ. ಇನ್ನು ಹೆಚ್ಚಿನ ನೀರು ಹರಿಸುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಎತ್ತರದ ಪ್ರದೇಶಗಳಿಗೆ ಹೋಗಬೇಕು ಹಾಗೂ ನದಿಗೆ ಯಾರು ಕೂಡ ಇಳಿಯದಂತೆ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net