ಟಿಬಿಡ್ಯಾಂನ ಮೂರು ಕ್ರಸ್ಟ್ ಗೇಟ್‌ನಿಂದ ನದಿಗೆ ನೀರು

news
ತುಂಗಭದ್ರಾ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್‌ನಿಂದ ಸೋಮವಾರ ಸಂಜೆ ನದಿಗೆ ನೀರು ಬಿಡುಗಡೆ ಮಾಡಲಾಯಿತು.
Published on

ಹೊಸಪೇಟೆ: ತುಂಗಭದ್ರಾ ಜಲಾಯನ ಪ್ರದೇಶದಲ್ಲಿ ಮಲೆನಾಡಿನಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಮೂರು ಕ್ರಸ್ಟ್ ಗೇಟ್ ನಿಂದ ಸೋಮವಾರ ಸಂಜೆ ನದಿಗೆ ನೀರು ಹರಿಬಿಡಲಾಯಿತು.

ಸದ್ಯ ತುಂಗಭದ್ರಾ ಜಲಾಶಯದಲ್ಲಿ 1627.21 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ 5 ಅಡಿ ಅಷ್ಟೇ ಬಾಕಿಯಿದೆ. ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಒಟ್ಟಾರೆಯಾಗಿ 50 ಕ್ಯೂಸೆಕ್ ವರೆಗೆ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ಹೀಗಾಗಿ, ನದಿ ಪಾತ್ರದ ಜನರು-ಜಾನುವಾರಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯ ಮಂಡಳಿ ಎಚ್ಚರಿಕೆ ಕೂಡ ಈಗಾಗಲೇ ನೀಡಿದೆ.

ಕಳೆದ ಮೂರು ದಿನಗಳಲ್ಲಿ 30 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜು.17ರಂದು 63320 ಒಳಹರಿವಿಗೆ 39.718 ಟಿಎಂಸಿ ನೀರು ಸಂಗ್ರವಾಗಿತ್ತು. ಜು.18ರಂದು 1.04 ಲಕ್ಷ ಕ್ಯೂಸೆಕ್ ಒಳಹರಿವಿಗೆ 46.802 ಟಿಎಂಸಿ ನೀರು ಹರಿದು ಬಂದಿತು. ಜು.19ರಂದು 55.972 ಟಿಎಂಸಿ ನೀರು, 20ರಂದು 65.110 ಟಿಎಂಸಿ ನೀರು, 21ರಂದು 74.582 ಟಿಎಂಸಿ, ಸೋಮವಾರ ಬೆಳಗ್ಗೆ 12 ಗಂಟೆ ವರದಿಗೆ 85.359 ಟಿಎಂಸಿ ನೀರು ಸಂಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net