

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಹಿನ್ನೆಲೆಯಲ್ಲಿ ಹಂಪಿಯ ನದಿ ಪತ್ರದ ಸ್ಮಾರಕಗಳು ಜಲಾವೃತವಾಗಿದ್ದು, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿರುವುದರಿಂದವ ಜಲಾಶಯಕ್ಕೆ ಕಳೆದ ವಾರ 1.20 ಕ್ಯೂಸೆಕ್ ನೀರು ಹರಿದು ಬಂದಿತ್ತು. ಆದ್ದರಿಂದ 6 ದಿನದಲ್ಲಿ ಅಂದಾಜು 70 ಟಿಎಂಸಿ ಬಂದಿದೆ. ಸದ್ಯ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇದರಿಂದ ಆ.6ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಬಾಗಿನ ಅರ್ಪಿಸಲಿದ್ದಾರೆ. ಎಲ್ಲಾ ಸಿದ್ದತೆಗಳು ನಡೆದಿದೆ ಎಂದರು.
ಜಲಾಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದ ತುಂಗಭದ್ರಾ ಜಲಾಶಯ 6 ದಿನದಲ್ಲಿ 70 ಟಿಎಂಸಿ ನೀರು ಬಂದಿದೆ. ಕೆಲ ದಿನಗಳಿಂದ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. 86 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಶುಕ್ರವಾರ ಸಂಜೆ 90 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹರಿಸಲಾಗಿದೆ ಇನ್ನೂ ವಾರ ಹೆಚ್ಚುಮಳೆಯಾಗುವ ಸಾದ್ಯತೆಯಿದೆ. ಜಿಲ್ಲೆಯಲ್ಲಿ 22 ಗ್ರಾಮ ನದಿಪತ್ರದ ಗ್ರಾಮಗಳಿವೆ. ಇದರಲ್ಲಿ ಎರಡು ಗ್ರಾಮಗಳು ಅಚ್ಚುಕಟ್ಟು ಪ್ರದೇಶದಲ್ಲಿ ಬರಲಿದೆ. 3.5 ಲಕ್ಷ ನೀರು ನದಿಗೆ ಬಿಟ್ಟಾಗ ಮಾತ್ರ ಸಮಸ್ಯೆ ಆಗಲಿದೆ. ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ನಡೆದಿದೆ. ಪ್ರವಾಸಿಗರು ನದಿಗೆ ಇಳಿಯಬಾರದ ಎಂದು ಭದ್ರತೆ ಒದಗಿಸಲಾಗಿದೆ ಎಂದರು.
ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಹೊಸಪೇಟೆ ತಹಸೀಲ್ದಾರ್ ಎಚ್ ವಿಶ್ವಜೀತ ಮೇಹತಾ, ತಾ.ಪಂ. ಇಒ ಹರೀಶ್, ಹಂಪಿ ಗ್ರಾ.ಪಂ ಅಧ್ಯಕ್ಷೆ ರಜನಿ, ಪಿಡಿಒ ಬಿ.ಗಂಗಾಧರ, ವಿಎ ರವಿಚಂದ್ರ ಇತರರಿದ್ದರು.